ನಿನ್ನ ಸಾವು ನಂಬಲಸಾಧ್ಯ ಅಪ್ಪು,
ನಮ್ಮಿಂದ ಅಗಲಿಸಿದ್ದು ದೇವರ ತಪ್ಪು,
ನೀನು ಸದಾ ನಗುಮೊಗದ ಅರಸು,
ನವ ಯುವಕರ ಪಾಲಿನ ಯುವರತ್ನ,
ನಾಡು ಮೆಚ್ಚಿದ ನಟ ಸಾರ್ವಭೌಮ,
ಅಭಿಮಾನಿಗಳಿಗೆ ಅಣ್ಣಾ ಬಾಂಡ್.
ಅಪ್ಪನಂತೆ ಬಾಳಿದ ಸರಳತೆಯ ವಂಶಿ,
ದಟ್ಟವಾಗಿ ಬೆಳೆದ ಬೆಟ್ಟದ ಹೂವು,
ಸೋಲೇ ಕಾಣದಿರುವ ವೀರ ಕನ್ನಡಿಗ,
ಜನಕ ಪರಂಪರೆಯ ಕನ್ನಡದ ಜಾಕಿ.
ಅನಾಥರ ಕೈ ಹಿಡಿದ ಅಂಜನಿಪುತ್ರ,
ಜನ್ಮ ಸಾರ್ಥಕತೆಯ ನಮ್ಮ ಬಸವ,
ಅದ್ಭುತ ನೃತ್ಯ, ಗಾಯನದ ಮಿಲನ,
ಮಕ್ಕಳ ಶಿಕ್ಷಣಕ್ಕನುವಾದ ರಣವಿಕ್ರಮ.
ವೃದ್ಧರಿಗೆ ದೈರ್ಯ ತುಂಬಿದ ಮೌರ್ಯ,
ಬಡಿವಾರವೇ ತೋರದ ಪರಮಾತ್ಮ,
ನಂಬಿದವರಿಗೆ ಬೆನ್ನು ತಿಟ್ಟಿದ ಮೈತ್ರಿ,
ಕೋಟ್ಯಾಧಿಪತಿ ನಡೆಸಿದ ಅಜಯ್.
ಬಾಲ ನಟನೆಯಲ್ಲಿ ಸೈ ಭಕ್ತಪ್ರಹ್ಲಾದ,
ನಿನ್ನಿಂದಲೇ ಗೋಮಾತೆಗಿಷ್ಟು ಆಶ್ರಯ,
ನಿನ್ನಗಲಿಕೆಗೆ ಆತ್ಮಗಳು ಬಲು ನೊಂದಿವೆ,
ಮತ್ತೆ ಹುಟ್ಟಿ ಬಾ ಪುನಿತ್ ಕಂಗಳು ಕಂದಿವೆ.
- ಬಿ.ಕುಬೇರಪ್ಪ(ಮುತ್ತುಕಂದ), ಕೆ.ಸೂಗೂರು, ಜಿ-ಬಳ್ಳಾರಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಅದ್ಭುತ ಕವನ ಅಣ್ಣ
ಪ್ರತ್ಯುತ್ತರಅಳಿಸಿಅದ್ಬುತವಾದ ಬರವಣಿಗೆ ..
ಪ್ರತ್ಯುತ್ತರಅಳಿಸಿ😭ಅಪ್ಪು ಸರ್ ಅಮರ😭
ಅಪ್ಪು ಸರ್ ನೆನಪಿಗಾಗಿ ನಿಮ್ಮ ಬರವಣಿಗೆ ಅದ್ಬುತವಾದುದ್ದು ಗೇಳಯ