ನಮಗೆಲ್ಲ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಅಂದರೆ ತುಂಬಾ ಇಷ್ಟ. ಆ ತುಂಟ ತರಲೇ, ನಗು- ಅಳು, ಕೋಪ, ಕ್ರೋಧ, ಮೋಹ, ಮತ್ತು ಪ್ರೀತಿ ಇವುಗಳೆಲ್ಲಾ ಮಾನವನ ಒಂದು ಅಂಗ ಇದ್ದ ಹಾಗೆ, ಇದನ್ನೆಲ್ಲ ನೆನಪಿಸಿಕೊಂಡು ಇಂದು ನಾನು ನನ್ನ ಹಳೆಯ ನೆನಪನ್ನು ಹೊಸ ಸೊಗಸಿನೋಡನೆ ನಿಮ್ಮೋಡನೆ ನಾನು ಹಂಚಿಕೊಳ್ಳಲು ಬಯಸಿ, ನನಗೆ ನೆನಪಿಸುವ ಎಲ್ಲಾ ನೆನಪನ್ನು ಮರುಕಳುಹಿಸಲು ಬಯಸುತ್ತೇನೆ.
ನನಗೆ ಆಗ ತುಂಬಾ ಚಿಕ್ಕ ವಯಸ್ಸು ಸುಮಾರು 4-5 ವರ್ಷವೆನೋ ನನಗೋ ಬಕೆಟ್ ನಲ್ಲಿ ಸ್ನಾನ ಮಾಡೋದು ಅಂದ್ರೆ ತುಂಬಾ ಇಷ್ಟ, ನೀರಲ್ಲಿ ಕಾಲು ಮುಳುಗಿಸಿ ನನ್ನ ಕಾಲುಗಳು ಅದೇಷ್ಟು ಸುಂದರವಾಗಿ ಕಾಣುತ್ತವೆ ಎಂದು ಹೇಳುತ್ತಾ ಆನಂದ ಸವಿಯೋದು ಅಂದರೆ ತುಂಬಾ ಇಷ್ಟ. ಹೀಗೆ ಸ್ನಾನ ಮಾಡ್ತಾ ಮಾಡ್ತಾ ಒಂದು ದಿನ ಮಧ್ಯಾನ್ಹದ ವೇಳೆ ಸುಮಾರು ಒಂದು ಗಂಟೆ ಆಗಿತ್ತು, ಆಗ ನಾನು ನೀರಲ್ಲಿ ಸ್ನಾನ ಮಾಡ್ತಾ ಇರೋವಾಗ ಕಾಲು ಜಾರಿ ಕೊಳಚೆ ನೀರಲ್ಲಿ ಬಿದ್ದಾಗ ನನ್ನ ಮುಖದಲ್ಲಿ ಮೂಡುವ ಆ ಮುನಿಸು ನೋಡಿ ನನ್ನ ತಾಯಿ- ತಂದೆಯವರು ಹೊಟ್ಟೆ ತುಂಬ ನಕ್ಕಿದ್ದರು. ನನಗಾಗಿ ತುಸು ಕೋಪ ಇತ್ತು. ಅಪ್ಪ ಅಮ್ಮನಿಗೆ ತುಂಬ ಬೈದು ಅಳುತ್ತಾ ಕೂತು ಚಾದರ ಹೊದಿಸಿಕೊಂಡು ಮಲಗಿದ್ದೆ ಅಂತ ನನ್ನ ತಾಯಿಯವರು ನನಗೆ ಹೇಳಿದಾಗ ಹಳೆಯ ನೆನಪು ತಮಾಷೆ ರೂಪದಲ್ಲಿ ಮರು ಕಳುಹಿಸಿದ ನೆನಪನ್ನು ನೆನಪಿಸಿಕೊಂಡಾಗ ಅದೇನೋ ಹರುಷವಾಯಿತು ನನ್ನ ಮನಸ್ಸಿಗೆ.
ಮತ್ತೆ ಭಾನಿ ಅಂದರೆ ನಾವು ಚಿಕ್ಕವರಿರುವಾಗ ಕಣ್ಣಿರು ತುಂಬಲು ಬಕೆಟ್ ಬಳಸುತ್ತಿರಲಿಲ್ಲ ಬದಲು ಮಣ್ಣಿನ ಭಾನಿ ಬಳಸುತ್ತಾ ಇದ್ದರು. ನಮ್ಮ ಮನೆಯಲ್ಲಿ ತುಂಬಾ ದೊಡ್ಡ ಭಾನಿ ಇತ್ತು. ಅದರ ತುಂಬಾ ನೀರು ತುಂಬಿತ್ತು. ನನಗೆ ಆಗ ಏನೂ ತಿಳಿಯುತ್ತಿರಲಿಲ್ಲ. ಆ ಭಾನಿಯೋಳಗೆ ನಾನು ಮುಳುಗಿ ಬಿಟ್ಟಿದ್ದೆನಂತೆ. ಉಗುರಂಚು ಎಳೆಯಿಂದ ಬೆರೆಯಾದ ಹಾಗೆ ನಾನು ಕೂಡಾ ಸಾವಿನಂಚಿನಿಂದ ಪಾರಾದೆ ಎಂದು ನನ್ನ ತಾಯಿಯವರು ನನಗೆ ಹೇಳುತ್ತಾರೆ. ಇದು ಗಂಭೀರವಾದ ವಿಷಯವಾದರೂ ನನಗೆ ಇದು ನೆನಪಾದಾಗಲೆಲ್ಲ ತಮಾಷೆಯಾಗಿ ಪರಿಭ್ರಮಿಸುತ್ತದೆ. ಅದೇಷ್ಟು ಸುಂದರವಾದ ಅನುಭವವದು ಕೆಲವೊಮ್ಮೆ ನಾನು ಪುಟ್ಟ ಹೆಜ್ಜೆಯನ್ನಿಡುತ್ತಾ ಮನೆ ತುಂಬ ನನ್ನ ಪುಟ್ಟ ಪುಟ್ಟ ಹೆಜ್ಜೆಯಿಂದ ರಂಗೋಲಿ ಹಾಳು ಮಾಡುತ್ತ, ಅಮ್ಮನ ಹತ್ತಿರ ಕಿವಿ ಹಿಂಡಿಸಿಕೊಳ್ಳುತ್ತಾ ಇರಬೇಕೆಂದು ಬಹಳ ಅನಿಸುತ್ತದೆ.
ನಂತರ ಸುಮಾರು ನನಗೆ 6- 7ವರ್ಷ ವಯಸ್ಸಾದಾಗ ಶಾಲೆಗೆ ಸೇರಿಸಿದರು. ಆಗ ತಾನೇ ಅಮ್ಮನಿಗೆ 8 ತಿಂಗಳಾಗಿತ್ತು. ನನಗೆ ಅಮ್ಮನ ನೆನಪಾಗಿ ಅಂಗನವಾಡಿಗೆ ಹೋಗದೆ ನನ್ನ ತಾಯಿಯವರು ನೆನಪಾಗಿ ಓಡಿ ಬಂದು ಬೀಡುತಿದ್ದೆ. ಇದನ್ನೆಲ್ಲ ನೆನಪಿಸಿಕೊಂಡಾಗ ನನಗೆ ಅಮ್ಮನ ಮಡಿಲಲ್ಲಿ ಮಗು ಆಗಿ ಇರಬೇಕಾಗಿತ್ತು ಅನಿಸುತ್ತದೆ. ಅದೊಂದು ಸುಂದರ ಕ್ಷಣ .
ನನಗೆ ಆಗ 9 ವರ್ಷಕ್ಕೆ ಬಿದ್ದಾಗ ನಾನು 4 ನೇ ತರಗತಿಯಲ್ಲಿ ಇದ್ದೇ, ನಾನು ಕಲಿತಿದ್ದು ಪ್ರಾಥಮಿಕ ಶಾಲೆಯಾದ ಸರಕಾರಿ ಶಾಲೆಯಲ್ಲಿ ಓದಲು ಪ್ರಾರಂಭಿಸಿದೆ. ಅಲ್ಲಿ ರಮೇಶ್ ಸರ್ ರವರು ಇದ್ದರು. ಅವರಿಗೆ ಎಲ್ಲ ವಿದ್ಯಾರ್ಥಿ ಗಳು ಒಂದೇ ಆಗಿತ್ತು. ಆದರೆ ನನ್ನನ್ನು ತುಂಬ ಸತಾಯಿಸುತಿದ್ದರು. ಒಂದು ಭಾರಿ ನಾನು ನನ್ನ ಗೆಳತಿಯೊಬ್ಬಳಿಗೆ ಆಟವಾಡುವ ಸಮಯದಲ್ಲಿ ನನಗೆ ತಿಳಿದೋ ತಿಳಿಯದೆಯೋ ಹೊಡೆದು ಬಿಟ್ಟಿದ್ದೆ. ಆ ಕ್ಷಣ ರಮೇಶ್ ಸರ್ ನನಗೆ ತುಂಬಾ ಹೊಡೆದಿದ್ದರು. ತುಂಬಾ ದೊಡ್ಡ ಬಾರಿ ಕೋಲಿನಿಂದ ಹೊಡೆದಿದ್ದರು. ನಾನು ಜೋರಾಗಿ ಅಳುತ್ತಾ ಇದ್ದೆ. ಆಗ ಸರ್ ಪುಟ್ಟ ಮಗುವಿನ ಹಾಗೆ ನನ್ನನ್ನು ಸಲಹಿದರು. ತಮ್ಮ ಅವಳಿ- ಜವಳಿ ಮಕ್ಕಳಂತೆ ನನ್ನನ್ನು ನೋಡಿಕೊಂಡರು.
11-12 ರಲ್ಲಿ ನಮಗೆ 'ಸಮಾಜ 'ವಿಷಯವನ್ನು ಕಲಿಸುತ್ತಾ ಇದ್ದರು. ಅವರಿಗೆ ನಾನು ಅಂದ್ರೆ ತುಂಬ ಪ್ರೀತಿ ಗೊತ್ತಿಲ್ಲ ಯಾವ ಜನುಮದ ಋುಣಾನು ಬಂಧನೋ ಏನೋ ತಾಯಿಯಂತೆ ಭಾಸ ಆಗುತ್ತಾ ಇದ್ದರು. ಅವರಿಗೂ ನಾನು ಮಗಳಾಗಿದ್ದೇನೋ ಏನೋ ತಿಳಿದಿಲ್ಲ. ಅರಿವಿಲ್ಲದ ವಯಸ್ಸು ಆಳ ಹುಡುಕಿದವರು ಯಾರೆಂದು ನಾನೆಂದು ಹೇಳಲು ಸಾಧ್ಯವಿಲ್ಲ. ಇದೆಲ್ಲಾ ನನ್ನ ಯಾವುದೋ ಜನ್ಮದ ಪುಣ್ಯ ವೆನೋ ಎಂದೆನಿಸುತದೆ.
ಮತ್ತು ಕೊನೆಯದಾಗಿ ನಾನು 7 ನೇಯ ತರಗತಿಯಲ್ಲಿ ಇರುವಾಗ ನಮಗೆ ಇಂಗ್ಲಿಷ್ ಕಲಿಸಲು ಇಬ್ಬರು ಶಿಕ್ಷಕಿಯರು ಬಂದರು, ಅವರ ಹೆಸರು ಜಯಲಕ್ಷ್ಮಿ, ಮತ್ತು ಅನ್ನಪೂರ್ಣ ಟೀಚರ್ ಇಬ್ಬರು ನನಗೆ ತುಂಬಾ ಇಷ್ಟವಾದ ಶಿಕ್ಷಕಿಯರು ಇಂಗ್ಲಿಷ್ ಅಂದರೆ ತಲೆ ತಿರುಗುತ್ತಿರುವಾಗ ನನ್ನ ತಲೆಯಲ್ಲಿ ಇಂಗ್ಲಿಷ್ ಶಾಶ್ವತವಾಗಿ ಉಳಿದಿರುವ ಹಾಗೆ ಮಾಡಿದರು. ಆದರೆ ವಿಧಿಯಾಟ ನೋಡಿ ನಮ್ಮಿಂದ ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅವರೇ ಅನ್ನಪೂರ್ಣ ಟೀಚರ್ ಇವರು ತುಂಬಾ ಶಾಂತ ಸ್ವರೂಪಿಯಾಗಿದ್ದರು. ಆದರೆ ಇದು ದೇವರಿಗೂ ಇಷ್ಟವಾಗಲಿಲ್ಲ ಏನೋ ಬೇಗ ನಮ್ಮಿಂದ ಅವರನ್ನು ಎಂದು ಕಾಣದ ಲೋಕಕ್ಕೆ ಕೊಂಡೈದನು. ಇದು ನೋವಿನ ಅನುಭವ ಆದರೂ, ಹಳೆ ನೆನಪು ಅದೆಷ್ಟೋ ಸವಿ ನೆನಪನ್ನು ಮೆಲಕು ಹಾಕಿದೆ ನೆನೆದಾಗ ಸುಖದ ಜೊತೆಗೆ ಸಂಕಟವು ಆಗುತ್ತದೆ. ನಾನು ಜೋರಾಗಿ ಅತ್ತು ಬಿಟ್ಟಿದ್ದೇ.
ನಂತರ ನಾನು ಪ್ರೌಢಶಾಲೆಯಾದ ಶ್ರೀ ಕಾಳಿಕಾ ಭವಾನಿ ಸೆಕೆಂಡರಿ ಸ್ಕೂಲ್ ಕಾನಸೂರು ಗೆ ಸೇರಿಕೊಂಡೆ. ಅಲ್ಲಿಯೂ ಕೂಡಾ ಗುರು ಎಂಬ ದೈತ್ಯಾಕಾರದ ಆಲದ ಮರ ನಮಗೆಲ್ಲ ಆಶ್ರಯ ನೀಡಿದೆ. ನಾವು ಕಲಿಯುವಾಗ ನನ್ನ ಗುರುಗಳಾದ ಶಾಂತ ಟೀಚರ್ (ತಾಯಿಯ ಅನುಭವ ವಾಗುವುದು),ಪ್ರವೀಣ್ ಸರ್, ಮೀನಾ ಟೀಚರ್, ಯಶಸ್ವಿನಿ ಟೀಚರ್, ಮಾರುತಿ ಸರ್( ಅಣ್ಣನ ಹಾಗೆ), ಗುರೂಜಿ ಎಂದೇ ಪ್ರಖ್ಯಾತಿ ಪಡೆದಿರುವ ಕನ್ನಡಾಂಬೆ ಕನ್ನಡದ ಕಂದ ಎಂದು ಕರೆಸಿಕೊಳ್ಳುವ ನಮ್ಮ ಪ್ರೀತಿಯ ಎಸ್. ಎಮ್. ಭಟ್ಟರು ಹೀಗೆ ಹಲವಾರು ಮಂದಿ ಇವರೆಲ್ಲರ ಜೋತೆ ನಾವೆಲ್ಲರೂ ಅನ್ಯೋನ್ಯವಾಗಿ ಇದ್ದೆವು. ಇದೆಲ್ಲಾ ಹಳೆ ನೆನಪು ಹೊಸ ನೆನಪಾಗಿ ಮರುಕಳಿಸಿತು ನನಗೆ ಇಂದು. ಹ!! ಮರೆತೆ , ಎಮ್. ಆರ್. ಶೇಷಗಿರಿ ಸರ್ ರವರು ನಮ್ಮೆಲ್ಲರಿಗೂ ತಂದೆಯಾಗಿದ್ದರು. ಸಹ ಶಿಕ್ಷಕರಿಗೆ ಸಹಪಾಠಿಯಾಗಿ , ನಮಗೆ ಅವರ ಪಾಠಗಳನ್ನು ಕೇಳಿದಾಗ ಮತ್ತೊಮ್ಮೆ ಕೇಳಬೇಕು ಅನ್ನಿಸುತ್ತಿತ್ತು.
ಇದೆಲ್ಲಾ ನನ್ನ ಶಾಲಾ ದಿನಗಳು ಪರೀಕ್ಷೆಯ ಸಮಯದಲ್ಲಿ ತಡವರಿಸುತ್ತಾ ಬರುವುದು, ನಾಳೆ ಪರೀಕ್ಷೆ ಅಂದಾಗ ಆಗುವ ಭಯ, ಏನೂ ಓದದೇ ಬಂದಂತಹ ವಿದ್ಯಾರ್ಥಿಗಳನ್ನು ನೋಡಿದಾಗ ಅಯ್ಯೋ ಪಾಪ ಏನು ಓದಿಲ್ಲವೆನೋ ಅಂದುಕೊಂಡು ನಾವು ಬೇಸರ ಮಾಡಿಕೊಂಡ ಸಮಯವೆಲ್ಲ ಒಂದೊಮ್ಮೆ ನೆನೆದಾಗ ಆ ಕ್ಷಣ ತಲ್ಲಣ ವಾಗಿ ಮಾರ್ಪಡಬಾರದ ಅನ್ನೋ ಕಾತುರ ಮನಸ್ಸಲ್ಲಿ ಹರಿದಾಡುವುದು.ಈ ರೀತಿಯಾಗಿ ನನಗೆ ನನ್ನ ಶಾಲಾ ದಿನಗಳು, ಶಿಕ್ಷಕರ ನೆನಪು ಮರುಕಳಿಸಿತು. ಹಾಗೆ ಎಲ್ಲರ ಜೀವನದಲ್ಲೂ ಕೂಡಾ ಹಳೆಯ ನೆನಪು ಹೊಸ ಸೊಗಸಾಗಿ ಉದ್ದವಾಗುತ್ತದೆ. ನನ್ನ ಸವಿ ನೆನಪಿಗೆ ಕಾರಣಿ ಕರ್ತರಾದ ಪ್ರತಿ ಶಾಲಾ ಶಿಕ್ಷಕರಿಗೆ ಇಲ್ಲಿಂದಲೇ ನನ್ನದೊಂದು ನಮನ . ಇಷ್ಟೋಂದು ಅವಿಸ್ಮರಣೀಯವಾದ ಅನುಕರಣೀಯ ಅನುಭವ ನೀಡಿ ನಮ್ಮಂತಹ ಅದೆಷ್ಟೋ ಬಂಡೆ ಕಲ್ಲುಗಳಿಗೆ ರೂಪು ರೇಷೆ ನೀಡಿ ಉತ್ತಮ ಗುಣಮಟ್ಟದ, ಚಾರಿತ್ರಿಕ ವೈಚಾರಿಕತೆ ತೋಡಿಸಿ, ನಮ್ಮನ್ನೆಲ್ಲ ಸಹನೆಯ ಸಹಿಸಿಕೊಂಡ ನನ್ನ ಗೌರವಾನ್ವಿತ ಪ್ರತಿ ಗುರು ವೃಂದಕ್ಕೂ ನನ್ನ ಶೀರ ಸಾಸ್ಟಾಂಗ ಕರ ಮುಗಿವ ನಮನಗಳು ಸದಾಕಾಲವೂ ನಿಮ್ಮಲ್ಲರ ಬದುಕು ಹೊತ್ತಿಲಲ್ಲಿ ಉರಿಯುವ ಜ್ಯೋತಿಯಾಗಿ ಕೋಟಿ ಕೋಟಿ ಮಕ್ಕಳ ಬಾಳು ಹಸನಾಗಲಿ.... ಕೋಟಿ ಕೊಟ್ಟರು ಕರಗದ ನಿಮ್ಮ ಸೇವೆಯನ್ನು ನಾವೆಂದೂ ಮರೆಯಲು ಅಸಾಧ್ಯ! ಇತಿಹಾಸಕಾರರು ನೀವು, ಪ್ರೇರೆಪಣಾಕಾರರು ನೀವು, ನಿಮ್ಮಿಂದ ನಾವು, ಧನ್ಯವಾದಗಳು ನಿಮ್ಮ ಸೇವಾವೃತ್ತಿಗೆ.,...
- ಸೌಮ್ಯ ಗಣಪತಿ ನಾಯ್ಕ , ಕಾನಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Super
ಪ್ರತ್ಯುತ್ತರಅಳಿಸಿSuper soumya...nice
ಪ್ರತ್ಯುತ್ತರಅಳಿಸಿ