ತಿರುಗಿಸಲು ನಾನಾರು....?
ನಿಮ್ಮಂತೆ ಸಾಮಾನ್ಯ...!
ದೇವನನ್ನು ತಿರುಗಿಸಲು ಧೈರ್ಯವಾವುದು ಇಲ್ಲಿ?
ಮನದ ಭಕ್ತಿಯು ಸೋಕಿ ಗೆದ್ದಿತವನ..!
ತಿಮ್ಮಪ್ಪನಾಗಿ ಹುಟ್ಟಿದೆನು ನಾನಾಗ
ಕನಕವಾಯಿತು ನಾಮ ಧನಕನಕ ಸೋಕಿ!
ಸಾಮಾನ್ಯರೊಳಗೊಬ್ಬ ಸಾಮಾನ್ಯ ನಾನು
ಶ್ರೇಷ್ಠರಾಗಿಸಿದಿರೆನ್ನ ದಾಸನೆನುತಾ
ದರುಶನಕೆ ಹಾತೊರೆದು
ಅಲೆದಲೆದು ನಾ ಸೋತೆ
ಕೇಶವನ ಹೊತ್ತು ಕಾಗಿನೆಲೆಯಲ್ಲಿ ನಿಂತೆ
ಪುಣ್ಯವಾಯಿತು ಭೂಮಿ ಪಾದ ಧೂಳಿನಿಂದ
ಮನದ ಮಾತನ್ನು ನುಡಿದೆ
ನೆಲೆ ಅರಿತು ನಡೆಯಿರೆಂದೆ
ಅನುಸರಿಸುವವಗಾಯ್ತು ಅದುವೇ ಪಾಠ ಅನುಸರಿಸದವರಿಗದು ಕೊಂಕು ನೋಟ
ಸಕಲರೆಲ್ಲರೂ ಜಗದ ಕುಲದ ನೆಲೆಯನು ಅರಿತು ನಡೆದರೆ ಕಾಣುವುದು ನಿಜದ ಸ್ವರ್ಗ
ದಾಸನಾಗಿಯೇ ನಾನು ನುಡಿದ ಮಾತನು ನಂಬಿ
ನಡೆದವರು ಪಡೆವರು ಮುಕ್ತಿ ಮಾರ್ಗ
- ಡಾ. ಸುರೇಶ್ ಕಲಾಪ್ರಿಯಾ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ