ಒಬ್ಬ ಯುವಕನು ಮಾತೃ ಋಣವನ್ನು ತೀರಿಸಲೆಂದು ತನ್ನ ತಾಯಿಗೆ ಒಂದು ಲಕ್ಷ ಬಂಗಾರದ ನಾಣ್ಯಗಳನ್ನು ಕೊಟ್ಟು ಇದರಿಂದ ನಿನಗೆ ಇಷ್ಟ ವಾದುದನ್ನು ಮಾಡಿಸಿಕೊ, ನನಗೆ ತಾಯಿ ಋಣದಿಂದ ಮುಕ್ತಿ ಸಿಗುತ್ತದೆ ಎನ್ನುತ್ತಾನೆ. ತಾಯಿ ಮುಗುಳ್ನಗುತ್ತ ಹೀಗೆ ಹೇಳಿದಳು. ಮಗು ನನ್ನ ಋಣ ತೀರಿಸಲು ಈ ಹಣ ನನಗೆ ಬೇಡ , ನೀನು ಒಂದು ದಿನ ರಾತ್ರಿ ನನ್ನ ಬಳಿ ಇದ್ದು ಸೇವೆ ಮಾಡಿದರೆ ಸಾಕು ಅಂತ ಹೇಳಿದಳು. ತಾಯಿ ಹೇಳಿದಂತೆ ಮಗನು ಸರಿಯೆಂದನು
ರಾತ್ರಿ ತಾಯಿಯ ಮಂಚದ. ಬಳಿ ಮಲಗುತ್ತಾನೆ. ಮಗನು ನಿದ್ರೆಗೆ ಜಾರುತ್ತಾನೆ. ಆಗ ತಾಯಿ ಮಗನೆ ನನಗೆ ದಾಹ ಆಗುತ್ತದೆ ಸ್ವಲ್ಪ ನೀರು ಕುಡಿಸು ಎಂದು ಹೇಳುತ್ತಾಳೆ. ಮಗನು ಸಂತೋಷ ದಿಂದ ಎದ್ದು ಗ್ಲಾಸಿನಿಂದ ತಾಯಿಗೆ ನೀರನ್ನು ಕುಡಿಸುತ್ತಾನೆ. ತಾಯಿ ಎರಡು ಗುಟುಕು ನೀರನ್ನು ಕುಡಿದಾಗ ಲೋಟ ಪಕ್ಕಕ್ಕೆ ಜಾರಿ ಬೀಳುತ್ತದೆ. ಮಗನು ಮೌನದಿಂದ ಮಲಗುತ್ತಾನೆ.
ಮತ್ತೆ ಮಗನು ನಿದ್ರೆಗೆ ಜಾರಲು ತಾಯಿ ಮತ್ತೆ ಮಗನಿಗೆ ಸ್ವಲ್ಪ ನೀರು ಕುಡಿಸು ಅಂತ ಕೇಳುತ್ತಾಳೆ . ಮಗನು ಮತ್ತೆ ಎದ್ದು ನೀರು ಕುಡಿಸುತ್ತಾನೆ ಮತ್ತೆ ನೀರು ಚೆಲ್ಲಿ ಹಾಸಿಗೆಯೆಲ್ಲ. ಒದ್ದೆಯಾಗುತ್ತದೆ ಮಗ ತಾಯಿಯನ್ನು ಏನು ಮಾಡಿದೆ ಅಮ್ಮಾ ಅಂತ ಪ್ರಶ್ನಿಸಿದ, ಅದಕ್ಕೆ ತಾಯಿ ಆಕಸ್ಮಾತ್ತಾಗಿ ಆಯಿತು ಮಗು ಅಂತ ಹೇಳಿದಳು. ಸ್ವಲ್ಪ ಸಮಯದ ನಂತರ ತಾಯಿ ಮತ್ತೆ ನೀರು ಕುಡಿಸಲು ಹೇಳಿದಳು ಅದಕ್ಕೆ ಮಗ ಕೋಪಿತನಾಗಿ ಈವಾಗ ತಾನೆ ನೀರು ಕುಡಿದೆ ಯಲ್ಲವೆ ಎಷ್ಟು ನೀರು ಕುಡಿಯುವೆ ನೀನೇನಾದರು ಹತ್ತಿಯ. ಬೀಜ ಗಳನ್ನು ತಿಂದೆಯಾ ಅಂತ ಹೇಳಿ ನೀರನ್ನು ಕೊಟ್ಟನು. ಮತ್ತೆ ನೀರನ್ನು ಕುಡಿಯಲು ಹೋಗಿ ನೀರು ಚೆಲ್ಲುತ್ತದೆ.
ಆ ಸಂದರ್ಭದಲ್ಲಿ ಆ ಮಗನು ತಾಳ್ಮೆಯನ್ನು ಕಳೆದು ಒಮ್ಮೆ ಜೋರಾಗಿ ಬಾಯಿಬಂದ ಬೈದು ನೀವು ನನ್ನನ್ನು ಪರೀಕ್ಷೆ ಮಾಡುತ್ತಾ ಇದ್ದೀರಾ ಎಂದು ಮಲಗಿಕೊಂಡನು. ಇತ್ತ ತಾಯಿಯವರು ಇದೆ ನೋಡಿ ಮಕ್ಕಳನ್ನು ದೊಡ್ಡವರು ಮಾಡುವ ತನಕ ನಾವು ಎಷ್ಟಲ್ಲ ಕಷ್ಟ ಪಡುತ್ತೇವೆ, ನಾವುಗಳು ಸಾವಿರಾರು ಹರಕೆಯನ್ನು ಹೊತ್ತುಕೊಂಡು ಒಳ್ಳೆಯ ಕೂಸು ಆಗಲಿ ಎಂದು ಬೇಡಿಕೊಳ್ಳುತ್ತೇವೆ ಅವರೇ ನಮ್ಮ ಕೊನೆಯ ಕಾಲದಲ್ಲಿ ನೋಡಿಕೊಳ್ಳುತ್ತಾರೆ ಎನ್ನುವ ಭಾವನೆಗಳು ಎಲ್ಲವೂ ಗಾಳಿಯಲ್ಲೇ ಲೀನವಾಯಿತು ಎಂದು ಅಲ್ಲೇ ಇದ್ದ ಸಣ್ಣ ಪುಸ್ತಕದ ಹಾಳೆಯನ್ನು ತೆಗೆದುಕೊಂಡು "ಅಮೂಲ್ಯ ಸಂಪತ್ತು" ನಿಮಗೆ ಬೇಕು ಎಂದರು ಸಿಗುವುದಿಲ್ಲ ಎಷ್ಟೇ ಕರೆದರು ಬರುವುದಿಲ್ಲ ಎಂದು ಬರೆಯುವ ಹೊತ್ತಿಗೆ ಇತ್ತ ಮುಂಜಾನೆ ತುಳಸಿ ಕಟ್ಟೆಯಲ್ಲಿ ಹಚ್ಚಿದ ದೇವರ ದೀಪವು ಆರಿ ಹೋಯಿತು.ಇತ್ತ ಆಕೆಯ ಜೀವನ ಅಂತ್ಯವಾಯಿತು.
- ವೈಷ್ಣವಿ ಪುರಾಣಿಕ್ ಕುಂಭಾಸಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಚೆನ್ನಾಗಿದೆ, ಅರ್ಥಪೂರ್ಣವಾಗಿದೆ
ಪ್ರತ್ಯುತ್ತರಅಳಿಸಿ