ಶನಿವಾರ, ಡಿಸೆಂಬರ್ 11, 2021

ಆಧುನಿಕ ವಚನ (ಭಾವಾರ್ಥ ಸಹಿತ) - ಚಿಂತನ್

ಕಂಡಿಲ್ಲ ಎಂದೂ ದೇವರನ್ನು
ಕಂಡಿತೆ ಎಂದು ಪೂಜಿಸುವರಯ್ಯ 
ಕಂಡಿಲ್ಲ ಎಂದೂ ಪಿಶಾಚಿಯನ್ನು
ಬಡಿಯಿತೆ ಎಂದು ನಡುಗುವರಯ್ಯ 
ಕಂಡರೂ ಕಣ್ಣು ಕಟ್ಟುವ ಸತ್ಯವನ್ನು
ಕಾಣದಂತಿರುವರು ಈ ಮೂಢರು !
ಕಣ್ಣಿಲ್ಲದವನ ಕಣ್ಣನ್ನೇ ಕಿತ್ತು
ಕಾಲಿಲ್ಲದವನ ಕಾಲಿಗೆ ಒದೆದು
ಬಾಯಿಲ್ಲದವನ ನಾಲಿಗೆ ಕಿತ್ತು
ಮನಸಿಲ್ಲದವನ ಮನಸೋಲಿಸಿ ಸಾಯಿಸಿ
ಮಿಗ ಕೊಂದು ತಿಂದು ಪಾಪ ಕಳೆವರಯ್ಯ !

       ಭಾವರ್ಥ :ದೇವರನ್ನು ಇಂದಿಗೂ ಯಾರು ನೋಡಿಲ್ಲ, ಆದರೂ ಸಹ ದೇವರನ್ನು ಪೂಜಿಸುತ್ತಾರೆ. ಈ ಪೂಜೆಯನ್ನು ಮಾಡುವುದರಿಂದ ನಮ್ಮ ಕಷ್ಟಗಳು ದೂರವಾಗುತ್ತದೆ, ಮಾಡಿರುವ ಪಾಪಗಳು ಕಳೆಯುತ್ತವೆ ಎಂಬ ಕೆಟ್ಟ ಭ್ರಮೆಯಿಂದ ಫಲಾಹಾರಾದ್ರವ್ಯ ಗಳು ಪೋಲಾಗುತ್ತಿವೆ.
ಮೂಖ ಪ್ರಾಣಿಗಳು ಬಲಿಯಾಗುತ್ತಿವೆ. ಪಿಶಾಚಿಗಳನ್ನು ಸಹ ಯಾರು ನೋಡಿರಲು ಸಾಧ್ಯವಿಲ್ಲ, ನೋಡಿದರು ಮಾನಸಿಕ ದುರ್ಬಲ ಅಂತಾರಾಳದಲ್ಲಿ ಮಾತ್ರ, ನಿಜವಾಗಿಯೂ ಅಲ್ಲ.
ಮಾನಸಿಕ ದೌರ್ಬಲ್ಯದಿಂದಾಗುವ ಭ್ರಮೆಯಷ್ಟೇ. ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತನಾಡಲು ಸಾಧ್ಯವಾಗದ, ನಡೆಯಲು ಸಾಧ್ಯವಾಗದ ಎಷ್ಟೋ ಬಡ ಅಮಾಯಕರಿದ್ದಾರೆ.
ನೀವು ಮೌಢ್ಯತೆಯಿಂದ, ಭ್ರಮೆಯಿಂದ ದೇವರು ಹಾಗೂ ಪಿಶಾಚಿಯ ಹೆಸರಲ್ಲಿ ಹಣವನ್ನು ವ್ಯರ್ಥ ಮಾಡದೆ ಇಂತಹವರಿಗೆ ಸಹಾಯ ಮಾಡಿದರೆ ಒಬ್ಬ ನಿಮ್ಮಿಂದ ಪ್ರಪಂಚ ನೋಡ್ತಾನೆ, ಇನ್ನೊಬ್ಬ ನಡಿತಾನೆ, ಮತ್ತೊಬ್ಬ ಮಾತಾಡ್ತಾನೆ. ಇದನ್ನು ಮಾಡದೆ ನೀವು ಸುಮ್ಮನೆ ಈ ಅರ್ಥವಿಲ್ಲದ ಆಚರಣೆಗೆ ಹಣ ವ್ಯರ್ಥ ಮಾಡಿದರೆ ನಿಜವಾಗಿಯೂ ಕಣ್ಣಿಲ್ಲದವನ ಕಣ್ಣನ್ನೇ ಕಿತ್ತುಕೊಂಡಂತೆ, ಕಾಲಿಲ್ಲದವನ ಕಾಲು ಕಸಿದುಕೊಂಡಂತೆ, ಬಾಯಿಲ್ಲದವನ ನಾಲಿಗೆ ಕಿತ್ತುಕೊಂಡಂತೆ, ದಯವಿಟ್ಟು ಅರ್ಥವಿರುವ ಕೆಲಸ ಮಾಡಿ.   
- ಚಿಂತನ್.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
                         -

9 ಕಾಮೆಂಟ್‌ಗಳು:

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...