೧
ನೋವಿನ ಜೊತೆಗೊಂದು ನಿರಾಸೆ
ಏನು ಆಗುತ್ತಿಲ್ಲವೆಂಬ ಹತಾಶೆ
ಪ್ರತಿ ದಿನವೂ ಒಂದೊಂದು ಪರೀಕ್ಷೆ
ಎಲ್ಲದರಲ್ಲೂ ಸೋಲೆಂಬ ತಮಾಷೆ
ಆದರೂ ಸುಮ್ಮನಿರಲು ಬಿಡದು ನಿರೀಕ್ಷೆ
ಮರಳಿ ಯತ್ನವ ಮಾಡು ಇದೇ,
ಬದುಕಿಗೆ ನೀಡುವ ಪುಟ್ಟ ಭರವಸೆ
೨
ಉದ್ವೇಗಕ್ಕೆ ಒಳಗಾದರೆ ಮನಸ್ಸು
ಉರಿದು ಹೋಗುವುದು ನಿನ್ನ ಕನಸು
ಊಹಾಪೋಹಗಳಿಗೆ ತೋರಬೇಡ ಮುನಿಸು
ಮುಂದೆ ನಡೆ ಕಾಯುತಲಿದೆ ನಿನ್ನ ಯಶಸ್ಸು
೩
ನಿನ್ನೆಯ ನೆನಪು
ನಾಳೆಯ ಕನಸು
ಇಂದಿನ ಬದುಕು
ಎಲ್ಲದರಲ್ಲೂ ಜೀವಿಸು
೪
ನಗು ಮೊಗದ ಶೋಭಿತೆ
ದಿಟ್ಟ ಹೆಜ್ಜೆಯ ವನಿತೆ
ಅವಳಲ್ಲಿದೆ ಸಭ್ಯತೆ
ನಡತೆಯಲ್ಲಿದೆ ಪರಿಶುದ್ಧತೆ
ಹೆಣ್ಣೆಂದರೆ ಪರಿಪೂರ್ಣತೆ
ಅವಳಲ್ಲಿಲ್ಲ ಯಾವ ಕೊರತೆ
✍️ ಸ್ವಾತಿ ರಾವ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
👍
ಪ್ರತ್ಯುತ್ತರಅಳಿಸಿ