ಶನಿವಾರ, ಡಿಸೆಂಬರ್ 11, 2021

ಚಳಿಯ ಚುಂಬನ (ಕವಿತೆ) - ಹನುಮಂತ ರಾಜು. ಎನ್.

ಮಾಗಿಯ ಚಳಿಗೆ 
ತೂಗಿದೆ ತೆನೆ 
ಭತ್ತ ರಾಗಿ ಜೋಳ 
ನೋಡಲು ಬೆಳೆಗಳ ಮೇಳ !!

ಗಿಳಿವಿಂಡು ಗುಬ್ಬಿಗಳು 
ಹರುಷದಿ ಮೆಲ್ಲುತಿವೆ 
ಸೂರ್ಯಕಾಂತಿಯ ಬೀಜ 
ನಗುತಿರುವ ಸೂರ್ಯ ರಾಜ !!

ಝರಿ ನದಿಗಳು ಮೌನ 
ಟುವ್ವಿ ಹಕ್ಕಿಗಳ ಗಾನ 
ಹೊಂಗೆ ಹೂಗಳ ಸೋಪಾನ 
ಇಬ್ಬನಿ ಕರಗುವ ಧ್ಯಾನ !!

ರೈತರ ಮನದಲಿ ಹರುಷ 
ದುಡಿದು ದಣಿದರು ವರುಷ 
ಚಿನ್ನದ ಬೆಳೆಗಳ ನೋಡಿ 
ಹಾಡುತಿರುವರು ಕೂಡಿ !!

ಅಡಿಕೆ ಹೂಗಳು ಸುವಾಸನೆ ಬೀರಿ 
ಬಳಿಗೆ ಕರೆಸಿದೆ ಜೇನ ಸಾರಿ 
ಅವರೆಯ ಸೊಗಡು ಪಸರಿಸಿ 
ಬಿಸಿಯ ಸಾರು ತುಪ್ಪ ಸೇರಿಸಿ !!

ಬೆಟ್ಟ ಗುಡ್ಡಗಳ ಹಸಿರು 
ತುಂಬಿದ ಭೂತಾಯ ಬಸಿರು 
ಪ್ರೇಮಿಗಳ ಬೆಚ್ಚನೆ ಕನಸು 
ಕವಿಗೆ ಕವನಗಳ ಸೊಗಸು !!
✒️ಹನುಮಂತ ರಾಜು. ಎನ್. 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...