ಎಲ್ಲವೂ ಸಹಜ - ದೃಷ್ಟಿಗೆ ಬಲು ಸುಂದರ,
"ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ" ಒಪ್ಪುವ ವಿಚಾರ...
ಈ ನಿಸರ್ಗವೇ ಸೃಷ್ಟಿಕರ್ತನ ಅದ್ಭುತ! ಸೃಷ್ಟಿ,
ನಿಸರ್ಗ ನಿರ್ಮಿತ ರಮಣೀಯ-ನಯನ ಮನೋಹರ ಸುಂದರ ಕ್ಷಣಗಳ -ದೃಶ್ಯಗಳ ಆಸ್ವಾದಿಸುವುದು ಈ ನಮ್ಮ ದೃಷ್ಟಿ..
ಸೃಷ್ಟಿಯಲ್ಲಿನ ಸಹಜವಾದ ಸುಂದರ ದೃಶ್ಯಗಳು ಹಲವು,
ನಮ್ಮ ದೃಷ್ಟಿಗೆ ಗೋಚರವಾಗುವಂತಹವು ಕೆಲವು,
ನಿಸರ್ಗ ನಿರ್ಮಿತ ಸುಂದರ ಕ್ಷಣಗಳ ಆಸ್ವಾದಿಸುವುದೇ ರೋಮಾಂಚನ,
ಈ ಸೌಂದರ್ಯಕ್ಕೆ ಸೂರೆಗೊಳ್ಳುವವು ಈ ಮೈ-ಮನ..
ಮನುಷ್ಯನ ಸಹಜ ಬಣ್ಣ ನೋಡಿ ದೂರ ತಳ್ಳುವರು,
ಆತನ ಒಳ್ಳೆಯ ಗುಣವನ್ನ ಯಾರೂ ನಂಬಲಾರರು,
ಬಣ್ಣವ ನೋಡದೇ ವ್ಯಕ್ತಿಯ ಗುಣಕ್ಕೆ ತಲೆಬಾಗುವವರು ಕೆಲವರು,
ಮನುಜನ ಸಹಜ ಬಣ್ಣ -ಗಣಕ್ಕೆ ಬೆಲೆಯಿಲ್ಲ,
ಹಣದ ಮದದಿಂದ ಕೃತಕ ಬಣ್ಣ-ಗುಣಗಳ ಹಿಂಬಾಲಿಸುವವರೆಲ್ಲ,
ಈಗಿನ ಕಾಲದಲ್ಲಿ ಮುಖಕ್ಕೆ ಮೆತ್ತಿಕೊಂಡ ಮೇಕಪ್ ನ ಕೃತಕ ಬಣ್ಣಗಳ ನೋಡಿ ಮರುಳಾಗಿ ಹಿಂದೆಯೇ ಹಿಂಬಾಲಿಸುವವರು ತುಂಬಿಹರು ಸುತ್ತೆಲ್ಲ,
ಮುಖಕ್ಕೆ ಮೆತ್ತಿಕೊಂಡ ಬಣ್ಣಕ್ಕಿಂತ ಧರಿಸಿರುವ ಮುಖವಾಡಗಳು ಯಾರಿಗೂ ಕಾಣಿಸುವುದಿಲ್ಲ,
ಬಣ್ಣವನು ತೊಳೆದ ಮೇಲೆ- ಮುಖವಾಡಗಳು ಕಳಚಿದ ಮೇಲೆ ಏನೂ ಪ್ರಯೋಜನವಿಲ್ಲ,
ನಂಬಿಕೆಯೇ ಸುಳ್ಳಾಗಿ ಹೋಯಿತಲ್ಲಾ ಎಂದು ಮರುಗುವುದು ಮಾತ್ರ ತಪ್ಪಿದ್ದಲ್ಲ...
ಸಹಜ ಸುಂದರ ಬಣ್ಣಗಳ ಆಸ್ವಾದಿಸೋಣ,
ವ್ಯಕ್ತಿಯ ಬಣ್ಣ ಕಪ್ಪಾಗಿದ್ದರೂ ಗುಣಕ್ಕೆ ಗೌರವ ನೀಡೋಣ,
ಮುಖಕ್ಕೆ ಮೆತ್ತಿಕೊಂಡ ಬಣ್ಣವ ಕಂಡು ಹಿಂಬಾಲಿಸದಿರೋಣ,
ಮುಖವಾಡಗಳ ನಂಬಿ ಮೋಸಹೋಗದಿರೋಣ..
ಬದುಕಿದು ಬಗೆ-ಬಗೆಯ ಬಣ್ಣ,
ಕೆಲವೊಮ್ಮೆ ಕಪ್ಪು-ಕೆಲವೊಮ್ಮೆ ಬಿಳುಪು ಹಾಗೇ ಕೆಲವೊಮ್ಮೆ ರಂಗುರಂಗಾಗಿರುತ್ತೆ ಈ ಬದುಕಿನ ಬಣ್ಣ,
ಯಾವುದೇ ಬಣ್ಣದ ಬದುಕಿದ್ದರೂ ನಿತ್ಯವೂ ದಾರಿಯಲಿ ಸಾಗುತಲಿರೋಣ,
ಸಾಗುವ ದಾರಿಯುದ್ದಕ್ಕೂ ಪ್ರೀತಿಯ ಸವಿಯ ತುತ್ತನು ಉಣಿಸುತ ಸಾಗೋಣ...
ನೋಡಲು ಎಲ್ಲವೂ ಸಹಜ - ದೃಷ್ಟಿಗೆ ಬಲು ಸುಂದರ,
ಕೆಲವು ಬಣ್ಣಗಳು-ಮುಖವಾಡಗಳು ಭೀಕರ-ಭಯಂಕರ,
ಭಯ ಬೇಡವೇ ಬೇಡ ಸೃಷ್ಟಿಕರ್ತನೇ ನಮ್ಮ ಜೊತೆಗಾರ,
ಈ ಬದುಕೇ ಬಹಳ ಚಿತ್ರ- ವಿಚಿತ್ರ,
ಬಯಸಿದಂತಲ್ಲ ಬದುಕು ಬಂದಂತೆ ಸಾಗುತಿರುವ ನಿರಂತರ.....
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ...
8762110543
7676106237
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ