ಗುರುವಾರ, ಜನವರಿ 27, 2022

ಜಗದ ಕಣ್ಣು ನೀ (ಕವಿತೆ) - ನಂದಿನಿ ರಾಜಶೇಖರ್

ಬದುಕೆಂಬ ರಂಗ ಮಂದಿರದಲ್ಲಿ
ಇರುವೆ ನೀ ಹಲವಾರು  ಪಾತ್ರಗಳಲಿ
ಪೊರೆಯುವೆ ಅಕ್ಕನಾಗಿ ತಂಗಿಯಾಗಿ  
ಸಲಹುವೆ ತಾಯಿಯಾಗಿ ಹೆಂಡತಿಯಾಗಿ
ಕ್ಷಮಯಾ ಧರಿತ್ರಿ ನೀ
 ವಾತ್ಸಲ್ಯಮಯಿ ಸ್ಫೂರ್ತಿ ಸೆಲೆ ನೀ
ನೋವುಂಡರೂ ಆಳುವ ಮರೆ ಮಾಚುವೆ
ಎಲ್ಲ ಮರೆತು ಮುದದಿ
ನಗುವ ಚೆಲ್ಲವೆ
ಕೊಚ್ಚಿ ಹೋಗಲಿ  ನಡೆಯುವ ಅನಾಚಾರಗಳು
 ಕೊನೆಯಾಗಲಿ ಹಾಳು ಅನಾಹುತಗಳು
ಮೂಡಲಿ ನಮ್ಮಲ್ಲಿ ಆತ್ಮರಕ್ಷಣೆಯ ಪಾಠದ ಅರಿವು
ರಕ್ಷಿಸಿ ಸಂರಕ್ಷಿಸೋಣ ಸ್ತ್ರೀಯ ಇರುವು
ಒಲಿದರೆ ಮಾತೆಯಾಗುವೆ
 ಮುನಿದರೆ ಮಾರಿಯಾಗುವೆ
ಸೃಷ್ಟಿಯ ಅದ್ಭುತ ನೀನು
 ಸೋಜಿಗಕ್ಕೆ ನಿಲುಕದ ಮಿನುಗು ನೀನು 
ಉರಿಯುವ ಕೆಂಡದಂತಹಾ ಕಿಡಿಗಳಿವೆ ನಿನ್ನಲ್ಲಿ
ಬರುವ ಕಣ್ಣೀರ ಕಟ್ಟಿ ಹಾಕು ಧೈರ್ಯದಲಿ
ಭ್ರಮೆಗಳಾಚೆ ಸಾಗಿ ವಾಸ್ತವದಲಿ
ನಿನ್ನ ಗುರುತು ಕಂಡುಕೊ ಬಾಳಲಿ
ಬೇಡದ ಮಾನದಂಡಗಳಾಚೆ ಹೆಜ್ಜೆ ಇಡು
ಫೀನಿಕ್ಸ್ ನಂತೆ ಮತ್ತೆ ಆಸೆಯ ರೆಕ್ಕೆಗಳ ಬಡಿದು ಬೇಲಿಯ ದಾಟು
ಆಕಾಶವನೇ ಮುಟ್ಟಲಿ ನಿನ್ನ ಯಶೋಗಾಥೆ
ನೀ ಆಗು ಅನೇಕರಿಗೆ ಸ್ಫೂರ್ತಿ ದಾತೆ
- ನಂದಿನಿ ರಾಜಶೇಖರ್, ಹಾಸನ 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...