ಗುರುವಾರ, ಜನವರಿ 27, 2022

ಹೇ ಕೋಮಲೆ (ಕವಿತೆ) - ನಾಗೇಶ್ ಎಸ್.ಆರ್.ಸಿ.

 ನೀ ನನ್ನಲ್ಲೆ
ಬಾನಂಗಳದಿ ತುಸು ಮೆಲ್ಲನೆ
ಕಾಲಿಟ್ಟೆ ನನ್ನ ಹೃದಯದಂಗಳದಿ
ಹೃದಯ ಜಪಿಸುವ ಮುನ್ನ ಏಕೆ 
ನೀ ದೂರಾ ಹೊರಟೆ
"ಹೇಳೆ ಚಲುವೆ ನೀ ನಿಲ್ಲದೆ
ನಾ ಬದುಕುವೇನೆ...

ಕೆಂಪಾನ ಗುಲಾಬಿ ನಿನ್ನ ಮುಡಿಗೆ ತರುವೆ
ಅಂದದ ನನ್ನ ಅರಗಿಣಿಗೆ
ಚಂದದ ಬಳೆಯ ತೊಡಿಸುವೆ
ಸಿಂಗಾರದಿ ವೈಯಾರ ಮಾಡಿ
ಈ ಪುಟ್ಟ ಹೃದಯದಲ್ಲಿ ಕೊರಿಸುವೆ
"ಹೇಳೆ ಚಲುವೆ ನೀ ನಿಲ್ಲದೆ
ನಾ ಬದುಕುವೇನೆ...

ಗುಬ್ಬಿಯ ಗೂಡಂತೆ ಬೆಚ್ಚಗೆ ಕಾಯುವೆ ನೋವು ನಲಿವಿನಲು..
ನೀ ನೊಂದರು ನಾ ಅಳುವೆ
ಜೋಪಾನವಾಗಿ ಜೋಗುಳ ಹಾಡುವೆ..
"ಹೇಳೆ ಚಲುವೆ ನೀ ನಿಲ್ಲದೆ
ನಾ ಬದುಕವೇನೆ...
                  
- ನಾಗೇಶ್ ಎಸ್.ಆರ್.ಸಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...