ಅಮ್ಮ ಎಂದ ಕನ್ನಡ ಬಂಧ
ನವಮಾಸದಿ ಕಲಿಸಿದ ಅನುಬಂಧ
ತೊದಲಿನ ನುಡಿಯ ಅಂದದ ಗುಡಿಯು
ನಮ್ಮಯ ಜೀವದ ನಾಡಿಯ ಮಿಡಿತವು
ಮೆಟ್ಟಿದ ನೆಲದಿ ಕಟ್ಟಿದ ನೋವು
ಎದೆಯ ತಟ್ಟುತ ನಿಲ್ಲುವ ನಾವು
ಅಭಿಮಾನದ ಆಶ್ರಯ ಅಪ್ಪಟ ಕನ್ನಡ
ಅದುವೇ ನಿರಾಶ್ರಿತ ಅನ್ಯರ ಕರಿಮೋಡ
ಕಾಯಕವಿರಲಿ ಕಾಳಜಿಯಿರಲಿ
ನಿತ್ಯೋತ್ಸವದ ಪ್ರೇಮವು ಇರಲಿ
ಕನ್ನಡ ಭಾಷೆಯ ಸೊಗಡಿರಲಿ
ಎನ್ನಡ ಎನ್ನುವ ಭಾಷೆಯು ಹೊರಗಿರಲಿ
ಕರಗದಿರಲಿ ಕರುನಾಡ ಭಾಷೆಯು
ಹೃದಯದಲಿ ಅಚ್ಚೊತ್ತಲಿ ಆಶ್ರಯದಾಸೆಯು
ಆಡುವ ಭಾಷೆ ಆಳುವ ಭಾಷೆ
ಅಪ್ಪುತ ಒಪ್ಪುತ ಬೆಳೆಯಲಿ ಭಾಷೆ
ಭುವನೇಶ್ವರಿಯ ಕಣ್ಣೀರ ಒರಸಿ
ಕವಿ ಕಾವ್ಯ ಸಾಹಿತ್ಯವ ಹರಸಿ
ನಿತ್ಯವೂ ಬೆಳಗಿ ಕನ್ನಡ ಆರತಿ
ಬದುಕಲಿ ಕನ್ನಡ ಉಸಿರ ಜ್ಯೋತಿ
✍🏻 ರಂಜಿತ್ ಕುದುಪಜೆ
S/o ದಾಮೋದರ ಕೆ. ಡಿ.
ತಣ್ಣಿಮಾನಿ ಗ್ರಾಮ
ಭಾಗಮಂಡಲ
ಮಡಿಕೇರಿ - ೫୭೧೨೪୭
ಮೋ : ೯೪೮೦೭೩೨೫೭೬
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
್ ಸರ
ಪ್ರತ್ಯುತ್ತರಅಳಿಸಿ