ನಿನ್ನ ಒಲವ ಅನುರಾಗದ ಅಲೆ ಮನವ ತಾಕಿದೆ ಗೆಳತಿ
ಪ್ರೇಮದೂಟೆ ಚಿಮ್ಮಿ ಸುಗಂಧದ ನವಿರು ರಾಚಿದೆ ಗೆಳತಿ
ನಿನ್ನ ಕರೆಯ ರಿಂಗಣಕೆ ತವಕಿಸುತಿದೆ ಮನ
ದ್ವನಿಯ ತಾಕಿಸಿ ಧಮನಿಯಲಿ ಚೈತನ್ಯ ನೀಡು ಗೆಳತಿ
ಸ್ವಪ್ನಗಳೆಲ್ಲ ಆಸೆಗಳ ಮೂಡಿಸುತಿವೆ ಮನದ ಕಡಲಿನಲ್ಲಿ ಪ್ರೇಮದ ದೋಣಿ ಸಾಗಿಸು ಗೆಳತಿ
ಮನದ ಬನದಲಿ ಮೇಘ ಮಾಲೆಯ ಸುರಿಸು
ಹಸಿರಾಗಿ ಒಲವ ಉಸಿರು ಪಸರಿಸಲಿ ಗೆಳತಿ
ನಿನ್ನ ಅನುರಾಗಕೆ ಕಾದಿಹನು ಹಾಲರಾಜಾ
ಬಂದು ಮನವ ತಬ್ಬಿ ಸಿಂಗರಿಸು ಗೆಳತಿ
✍️ ಹಾಲೇಶ್ ಕೆ ಜಿ
ಅಧ್ಯಕ್ಷರು,
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಜಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ