ಗೆಲ್ಲಬೇಕು ಗೆಲ್ಲಬೇಕು ಗಟ್ಟಿ
ಮನಸ ಮಾಡಬೇಕು
ಸಾಗರದ ಆಚೆ ಗೆಲುವಿನ ಕೋಟೆ
ಕಟ್ಟಬೇಕು ಸಾಗರದಲ್ಲಿ ಆಕೋಟೆಗೆ ಮೆಟ್ಟಿಲು
ಗೆಲುವೆಂಬ ಹಾದಿಯಲ್ಲಿ
ಕಲ್ಲು-ಮುಳ್ಳು ತುಳಿಯಬೇಕು
ಕ್ಷಣ ಕ್ಷಣಕ್ಕೂ ತಂದೆ ತಾಯ
ಬೆವರ ಹನಿಯ ನೆನೆಯ ಬೇಕು
ಸುತ್ತಿ ನಿಂದೆಯ ಸಹಿಸ ಬೇಕು
ಗೆಲ್ಲಬೇಕು ಗೆಲ್ಲಬೇಕು ಗಟ್ಟಿ ಮನಸ ಮಾಡಬೇಕು
ಗೆದ್ದೆನೆಂಬ ಕನಸು ಕಾಣು
ತಂದೆ ತಾಯ ಖುಷಿಯ ನೋಡು
ಕಂಡ ಕನಸ ನನಸಿಗಾಗಿ
ಗಟ್ಟಿ ಮನಸ ಮಾಡಬೇಕು
ಗೆಲುವೆಂಬ ಕೋಟೆಯ ಹಾದೀಲಿ
ಕಣ್ಣರಳಿಸೂ ದೃಶ್ಯಗಳು ನೂರಾರು
ಗುರಿ ಮರೆತು ಕ್ಷಣ ಸರಿದರು
ಗೆಲುವಿನ ಕೋಟೆ ಚೂರು ಚೂರು
ಗೆಲ್ಲಬೇಕು ಗೆಲ್ಲಬೇಕು ಗಟ್ಟಿ ಮನಸ ಮಾಡಬೇಕು
ನಿನ್ನವರಿಗಾಗಿ ನೀ ಗೆಲ್ಲಬೇಕು
ಹೆತ್ತವರ ಋುಣವ ತಿರಿಸಬೇಕು
ಗೆಲುವಿನ ರಥವ ಎಳೆಯಬೇಕು
ಗಟ್ಟಿ ಮನಸ ಮಾಡಬೇಕು
- ಐಶ್ವರ್ಯ ಶ್ರೀ, ಶರೆಗಾರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ