ನಿನ್ದೊನ್ದ್ ಪದ
ನನ್ದೊನ್ದ ಪದ
ಸೇರ್ದೊನ್ದು ಆಯ್ತು
ಚೆನ್ದೊನ್ದು ಕನ್ದ.....
ಕನ್ದದೊಳ್ಗೊನ್ದು ಪದ
ನಿನ್ದ್ಬಿಟ್ ಹೇಳ್ತು ಸದಾ
ನಿನ್ದನಿಯೇ ನಾನನ್ತಾ
ನನ್ದನಿಯೇ ನೀನನ್ತಾ....
ಕಣ್ಣಕಣ್ಣು ಕೂಡ್ಬಿಟ್ಟು
ಬಣ್ಣ ಕನಸಾ ಕಣ್ಬುಟ್ಟು
ಸಣ್ಣ ಗುನುಗಾ ಹಾಡ್ಬಿಟ್ಟು
ಅಣ್ಣೆ ಅಣ್ಪು ಬೆಳೆದ್ಬುಟ್ತು....
ಅನ್ಕುರವಾಗಿ ಪಿರೀತಿ
ಅನ್ಕನ ಹಾಕ್ತು ಎದೆಯೊಳ್ಗೆ
ಇನ್ಕ್ರ ಮರಿಲಾರೆ ಮನದೊಳ್ಗೆ
ಇನ್ಕಾರ ಮಾಡ್ಬೇಡ ನಿನ್ನೊಳ್ಗೆ....
ಎನ್ಟು ದಿಕ್ಕಿನ ನನ್ಟು ನಮ್ದು
ಒನ್ಟಿ ಜೀವಕೆ ನೀನೇ ಬನ್ಧು
ಸನ್ಕ್ಟ ಇಲ್ದನ್ಗ್ ನೋಡ್ಕತೀನಿ
ಮಡಿಕನ್ಡ ಎದೆಯಾವಳಗೆ..
- ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ