ಶನಿವಾರ, ಜನವರಿ 15, 2022

ಧರೆಯಲ್ಲಿನ ಆಟ (ಕವಿತೆ) - ಬಸವರಾಜ ಉಪ್ಪಿನ.

ಧರೆಯನ್ನಾಳಿದ ಮಹಾನ್ ದೊರೆಗಳೆಲ್ಲಾ
ಮರೆಯಾದರೂ ದೃವತಾರೆ ಯಂತೆ ಅಮರರಾದರು ದರೆಯನ್ನೆ ದರೋಡೆ ಹೊಡೆದ ಸ್ವಾರ್ಥಿಗಳೆಲ್ಲರೂ ಭವಿಷ್ಯದಲ್ಲಿ ಮಾರಣಹೋಮಕ್ಕೆ ಬಲಿಯಾದರು.

ಭವದೊಳಗೆ ಎಲ್ಲ ಧನವೇ ಮುಖ್ಯವೆಂದು ಧನಿಕರು ಮಾನವೀಯ ಮೌಲ್ಯವನ್ನು ಗಾಳಿಯಲ್ಲಿ ತೂರಿದರು ನರಳುವ ನರರಿಗೆ ನೆರಳಾದ ಹೃದಯವಂತರು
ಬಡವರ ಬಾಂಧವ್ಯ ತೆಗೆ ನಲುಮೆಯಾದರು.

ವಸುದೆಗೆ ಹಸಿರು ವಸ್ತ್ರವ ಶೃಂಗಾರದಿ ತೊಡಿಸಿದ
ರೈತರಲ್ಲ ಜಗದ ಜನರ ಹಸಿವಿಗೆ ಅನ್ನವನಿಕ್ಕಿದರು ಮನುಜನ ಮನದಲ್ಲಿ ವಿಷ ಬೀಜವ ಬಿತ್ತಿದ ದ್ರೋಹಿಗಳು ಬದುಕಿನ ಬುಡಕ್ಕೆ ಕೊಡಲಿಯ ಪೆಟ್ಟು ಹಾಕಿಕೊಂಡರು.

ಭೂರಮೆಯ ಉಳಿವಿಗಾಗಿ ತಮ್ಮ ಪ್ರಾಣತೆತ್ತ
ಮಹಾತ್ಮರೆಲ್ಲ ಸರ್ವರಿಗೂ ದಾರಿದೀಪವಾದರು
ಜಗವ ಬೆಳಗುವೆ ಎಂದು ದೀಪವ ಹಿಡಿದುಕೊಂಡು ತಿರುಗಾಡುವ ಗಾವಿಲರು ಪಾತಾಳಕ್ಕೆ ಹೋದರು.

-  ಬಸವರಾಜ ಉಪ್ಪಿನ.
  ಕುಕನೂರು ಜಿ/ ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...