ಗುರುವಾರ, ಜನವರಿ 27, 2022

ನನ್ನ ದೇಶ-ನನ್ನ ಹೆಮ್ಮೆ (ಕವಿತೆ) - ಹನುಮಂತ ಹೊಗರನಾಳ

ಹಾರಲಿ ಹಾರಲಿ ಆಕಾಶದ ಮಟ್ಟಕೆ
ಭಾರತಾಂಬೆಯ ತ್ರಿವರ್ಣ ಭಾವುಟ,
ಧೈರ್ಯ, ಶಾಂತಿ, ಸಮೃಧ್ಧಿಯ ಸಂಕೇತ
ಮಧ್ಯದೀ ಬೌಧ್ಧ ಧಮ್ಮದ ನೀತಿಯ ಚಕ್ರ....!!

ಕೈ ಎತ್ತಿ ಹೊಡೆಯುವೆವು ಬಾವುಟಕೆ ಸೆಲ್ಯೂಟ್
ವಿಶ್ವದೆಲ್ಲೆಡೆ ತೋರುವೆವು ಎಲ್ಲದರಲ್ಲೂ ಟ್ಯಾಲೆಂಟ್,
ಸಂಸ್ಕೃತಿ-ಆಚರಣೆಯಲಿ ನಾವೇ ಗ್ರೇಟ್
ದೇಶದ ರಕ್ಷಣೆಯಲಿ ನಮ್ಮ ಸೈನ್ಯವೇ ಸ್ಟ್ರಿಕ್ಟ್...!!

ದೇವಮಾನವರ ತಾಣ ನನ್ನದು
ದೇವಭಾಷೆಯ ಲಿಪಿಯು ನನ್ನದು,
ಶಾಸನಗಳ ಸರಮಾಲೆಯು ನನ್ನದು
ವಜ್ರ-ವೈಡೂರ್ಯಗಳ ಸಂಪತ್ತು ನನ್ನದು...!!

ರಾಜಮನೆತನಗಳ ರಂಗಭೂಮಿ ನನ್ನದು
ಖನಿಜ-ಸಂಪತ್ತಿನ ಸಾಗರ ನನ್ನದು,
ರಾಮಾಯಣ-ಮಹಾಭಾರತಗಳ ದೇಶ ನನ್ನದು
ವಿಶ್ವಕ್ಕೆ ಹೆಸರಾದ ಸಂವಿಧಾನ ನನ್ನದು....!!

ಆವಿಷ್ಕಾರಗಳ ಅವತಾರ ನನ್ನ ದೇಶ
ಜ್ನಾನಪೀಠಗಳ ಆಸ್ಥಾನ ನನ್ನ ದೇಶ,
ವಿಶ್ವ ಗುರು, ವಿಶ್ವ ಶಾಂತಿ, ವಿಶ್ವ ಜ್ಞಾನಿಯ ಹೆಮ್ಮೆಯ ನನ್ನ ದೇಶ.....!!
 - ಹನುಮಂತ ಹೊಗರನಾಳ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...