ಒಂದು ಕಾಡಿನಲ್ಲಿ ಅಚ್ಚು, ಮೀಟು,ಚುಮ್ಮಿ ಮತ್ತು ಚಿಟ್ಟೆ ಎಂಬ ನಾಲ್ಕು ಗುಬ್ಬಿಗಳು ವಾಸವಾಗಿದ್ದವು.ಅದರಲ್ಲಿ ಅಚ್ಚು ಮತ್ತು ಚುಮ್ಮಿ ಎಂಬ ಗುಬ್ಬಿಗಳು ಜಾಣರಾಗಿದ್ದವು, ಆದರೆ ಚಿಟ್ಟಿ ಗುಬ್ಬಿಗೆ ಏನು ಬರುತ್ತಿರಲಿಲ್ಲ ಒಂದು ದಿನ ಆಹಾರ ಹುಡುಕಿ ಸುಸ್ತಾಗಿ ಚುಮ್ಮಿ ಗುಬ್ಬಿ ಸಪ್ಪೆಮೋರೆ ಮಾಡಿಕೊಂಡು ಕುಳಿತಿತ್ತು ಆಗ ಅಲ್ಲಿಗೆ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು ಬಂದು ಚಿಟ್ಟಿ ಯಾಕೆ ಇಷ್ಟು ಬೇಸರದಲ್ಲಿ ಕುಳಿತಿದ್ದೀಯ ಏನಾಯ್ತು ಎನ್ನುತ್ತವೆ,ಅದಕ್ಕೆ ಚಿಟ್ಟೆ ಏನು ಮಾಡಲಿ ನನಗೆ ಎಲ್ಲಿಯೂ ಆಹಾರ ಸಿಗುತ್ತಿಲ್ಲ ,ದೂರ ಹೋಗಿ ಹುಡುಕಲು ನನಗೆ ಜಾಸ್ತಿ ಹೊತ್ತು ಹಾರುವ ಸಾಮರ್ಥ್ಯವಿಲ್ಲ ಎಂದು ಹೇಳುತ್ತದೆ .ಅದಕ್ಕೆ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು ಜಾಸ್ತಿ ಹೊತ್ತು ದೂರದವರೆಗೆ ಹಾರಲು ಕೆಲವು ನಿಯಮಗಳಿವೆ ನಾವು ನಿನಗೆ ಕಲಿಸುತ್ತೇವೆ ಮತ್ತು ನಾಳೆ ನಾವೇ ನಿನ್ನನ್ನು ಆಹಾರ ಇರುವ ಜಾಗಕ್ಕೆ ಕರೆದೊಯ್ಯುತ್ತೇವೆ ಎಂದು ಹೇಳುತ್ತವೆ ಅವುಗಳ ಮಾತು ಕೇಳಿ ಚಿಟ್ಟಿಗೆ ಬಹಳ ಸಂತೋಷವಾಯಿತು. ಅಂದು ಅಚ್ಚು ಮತ್ತು ಚುಮ್ಮಿ,ಚಿಟ್ಟಿಗೆ ದೂರದವರೆಗೆ ಹಾರಲು ನಿಯಮಗಳನ್ನು ಹೇಳಿಕೊಟ್ಟವು.ಚಿಟ್ಟಿರಾತ್ರಿ ಇಡೀ ಆ ನಿಯಮಗಳನ್ನು ಅಭ್ಯಾಸ ಮಾಡಿತು. ಮಾರನೇದಿನ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು ಬಂದು ಚಿಟ್ಟಿಯನ್ನು ಕರೆದುಕೊಂಡುಹೋದರು. ರಾತ್ರಿ ಅಭ್ಯಾಸ ಮಾಡಿದ್ದರಿಂದ ಚಿಟ್ಟಿ, ಅಚ್ಚು ಮತ್ತು ಚುಮ್ಮಿಗಿಂತ ಜೋರಾಗಿ ಹಾರುವುದನ್ನು ಕಲಿತಿತ್ತು. ಆದ್ದರಿಂದ ಅವುಗಳಿಗಿಂತ ತಾನೆ ಮುಂದೆ ಹೋಗಿ ಆಹಾರ ಹುಡುಕಿ ಅಚ್ಚು ಮತ್ತು ಚುಮ್ಮಿ ಗಾಗಿ ಕಾಯುತ್ತಾ ಕುಳಿತಿತ್ತು. ಇದರಿಂದ ಕೋಪಗೊಂಡ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು ನಮ್ಮಿಂದ ಹಾರಲು ಕಲಿತ ಚಿಟ್ಟಿ ನಮಗಿಂತ ವೇಗವಾಗಿ ಹಾರುತ್ತಿದೆ ಎಂದು ಹೊಟ್ಟೆಕಿಚ್ಚು ಪಟ್ಟವು.
ಸ್ವಲ್ಪ ದಿನದ ನಂತರ ಮಳೆಗಾಲ ಪ್ರಾರಂಭವಾಯಿತು. ಎಲ್ಲ ಗುಬ್ಬಿಗಳು ಗೂಡು ಕಟ್ಟಲು ಪ್ರಾರಂಭಿಸಿದವು,ಆದರೆ ಚಿಟ್ಟಿ ಗುಬ್ಬಿಗೆ ಗೂಡು ಕಟ್ಟಲು ಸಹ ಬರುತ್ತಿರಲಿಲ್ಲ, ಈ ವಿಷಯ ಅಚ್ಚು ಮತ್ತು ಚುಮ್ಮಿಗೆ ತಿಳಿಯಿತು. ಆಗ ಅವೆರಡೂ ಸೇರಿ ಸಂಚು ರೂಪಿಸಿದವು.ಚಿಟ್ಟೆಯು ಅಚ್ಚು ಮತ್ತು ಚುಮ್ಮಿ ಹತ್ತಿರ ಹೋಗಿ ಗೂಡುಕಟ್ಟಲು ಸಹಾಯ ಕೇಳಿತು ,ಅದಕ್ಕೆ ಅಚ್ಚು ಮತ್ತು ಚುಮ್ಮಿ ಒಪ್ಪಿಕೊಂಡು ನೀನು ಹುಲ್ಲಿನ ಕಡ್ಡಿ ತೆಗೆದುಕೊಂಡು ಬಾ ನಾವೇ ಗೂಡು ಕಟ್ಟಿಕೊಡುತ್ತೇವೆ ಎಂದು ಹೇಳಿದವು. ಅದಕ್ಕೆ ಚಿಟ್ಟಿ ಆಗಲಿ ಎಂದು ಹುಲ್ಲಿನ ಕಡ್ಡಿ ತಂದಿತು.ಅವು ತಮ್ಮ ಸಂಚಿ ನಂತೆ ಗೂಡು ಕಟ್ಟಿದವು .ಅವು ಮಾಡಿದ ಸಂಚು ಚಿಟ್ಟಿಗೆ ಹೊಳೆಯಲೇ ಇಲ್ಲ. ಇದು ತನ್ನದೂಂದು ಗೂಡು ಸಿದ್ದವಾಯಿತೆಂದು ತುಂಬಾ ಖುಷಿಯಾಗಿತ್ತು. ಮತ್ತು ಹೇಳಿತು ನೀವಿಬ್ಬರು ತುಂಬಾ ಒಳ್ಳೆಯವರು ನನಗೆ ತುಂಬಾ ಸಹಾಯ ಮಾಡಿದ್ದೀರಿ, ನಾನು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮಂತಹ ಸ್ನೇಹಿತರು ಸಿಕ್ಕಿರುವುದು ನನ್ನ ಭಾಗ್ಯ ಎಂದು. ಇತ್ತ ಅಚ್ಚು ಮತ್ತು ಚುಮ್ಮಿ ಮಾತನಾಡಿಕೊಂಡು ನಮ್ಮಿಂದ ಹಾರುವುದನ್ನು ಕಲಿತು ನಮಗಿಂತ ಮುಂದೆ ಬರುತ್ತೀಯಾ ಈಗ ನೋಡು ನಿನ್ನ ಪರಿಸ್ಥಿತಿ ಏನಾಗುತ್ತದೆ ಎಂದುಕೂಂಡವು.ಇತ್ತ ಸ್ವಲ್ಪ ಸಮಯದ ನಂತರ ಜೋರಾಗಿ ಗಾಳಿ ಬೀಸಲು ಶುರು ಮಾಡಿತು, ಎಲ್ಲರೂ ಗೂಡು ಸೇರಿದರು. ಗಾಳಿಯ ರಭಸಕ್ಕೆ ಚಿಟ್ಟಿಯ ಗೂಡಿನ ಒಂದೊಂದೆ ಕಡ್ಡಿಗಳು ಕಿತ್ತು ಹೋಗಲಾರಂಭಿಸಿದವು ಚಿಟ್ಟಿಗೆ ಭಯವಾಯಿತು ,ಜೋರಾಗಿ ಮಳೆಯು ಬರತೊಡಗಿತು, ಮಳೆಯ ಹೊಡೆತಕ್ಕೆ ಗೂಡು ಕಿತ್ತು ಹೋಯಿತು ಚಿಟ್ಟಿ ಕೆಳಗೆ ಬಿದ್ದಿತ್ತು. ಅದನ್ನು ನೋಡಿ ಅಚ್ಚು ಮತ್ತು ಚುಮ್ಮಿ ನಗತೊಡಗಿದರು, ಚಿಟ್ಟಿ ಮಳೆ ಹೋಗುವವರೆಗೆ ತನ್ನನ್ನು ಅವುಗಳ ಗೂಡಿಗೆ ಸೇರಿಸಿಕೊಳ್ಳಿ ಎಂದು ಬೇಡಿಕೊಂಡಿತು ಆದರೆ ಅವು ಅದಕ್ಕೆ ಜಾಗ ಕೊಡಲಿಲ್ಲ. ಚಿಟ್ಟಿ ಮಳೆಯ ರಭಸಕ್ಕೆ ಸಿಕ್ಕಿ ಸಾಯುವ ಸ್ಥಿತಿ ತಲುಪಿತು. ಆಗ ಅಲ್ಲಿಗೆ ಮೀಟು ಗುಬ್ಬಿಯು ಬಂದು ಚಿಟ್ಟಿಯ ರಕ್ಷಣೆ ಮಾಡಿತು. ಚಿಟ್ಟಿ ನಡೆದ ಘಟನೆಯನ್ನೆಲ್ಲಾ ಮೀಟುವಿಗೆ ಹೇಳಿ ತನಗೆ ಒಂದು ಗೂಡು ಕಟ್ಟಿಕೊಡುವಂತೆ ಕೇಳಿತು. ಅದಕ್ಕೆ ಮೀಟು ಒಂದು ಗೂಡು ಕಟ್ಟಿ ತೋರಿಸಿ, ತನ್ನಂತೆ ಕಟ್ಟಲು ಹೇಳಿತು ಈಗ ಚಿಟ್ಟಿ ಮೀಟುವಿಗಿಂತ ಸುಂದರವಾಗಿ ಗೂಡು ಕಟ್ಟಿತು. ಆಗ ಮೀಟುವಿಗೆ ತುಂಬಾ ಸಂತೋಷವಾಯಿತು. ನೀನು ನನಗಿಂತ ಸುಂದರವಾಗಿ ಕಟ್ಟಿದ್ದೀಯ ಎಂದಿತು ಮೀಟುವಿನ ಕಣ್ಣಲ್ಲಿ ಸಾರ್ಥಕ ಭಾವ ಕಾಣುತ್ತಿತ್ತು. ಅದು ಚಿಟ್ಟಿಯ ಗೂಡು ನೋಡಿ ಅಚ್ಚು ಮತ್ತು ಚುಮ್ಮಿಯಂತೆ ಹೊಟ್ಟೆಕಿಚ್ಚು ಪಡಲಿಲ್ಲ ಬದಲಾಗಿ ಹೆಚ್ಚು ಸಂತೋಷ ಪಟ್ಟಿತು, ಕಾರಣ ಮೀಟು ಚಿಟ್ಟಿಯ ಗುರುವಾಗಿತ್ತು
ನೋಡಿ ಪ್ರಪಂಚದಲ್ಲಿ ಯಾವುದೇ ಸ್ವಾರ್ಥವಿಲ್ಲದೆ, ಅಸೂಯೆ ಪಡೆದೆ ತನ್ನಲ್ಲಿರುವ ಜ್ಞಾನವನ್ನು ಹಂಚುವ ಏಕೈಕ ವ್ಯಕ್ತಿ ಗುರು.ಗುರು ಯಾವಾಗಲೂ ತನ್ನ ಶಿಷ್ಯ ತನಗಿಂತ ಒಂದು ಹೆಜ್ಜೆ ಮುಂದೆ ಇರಬೇಕೆಂದು ಬಯಸುತ್ತಾನೆ.
- ಐಶ್ವರ್ಯಾ ಶ್ರೀ, ಶರೆಗಾರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ