ನೋಡಲು ಬರಿಯ ಖಾಲಿ ಕಾಗದ,
ಖಾಲಿ ಕಾಗದ ಪುಟ ತುಂಬಿಸುವ ಹಠ ಇರಬೇಕು ಸದಾ,
ಮನಸಿನ ಭಾವನೆಗಳನು/ಕಲ್ಪನೆಗಳನು ಬರಹ ರೂಪಕ್ಕಿಳಿಸುವುದ,
ಖಾಲಿ ಕಾಗದದ ಮೇಲೆ ಮುತ್ತುಗಳಂತೆ ಅಕ್ಷರಗಳನು ಪೋಣಿಸುವುದ,
ಚಿತ್ರಗಳ ಗೀಚುವುದ-ರಂಗುರಂಗಿನ ಬಣ್ಣಗಳ ತುಂಬಿಸುವುದ,
ಅಕ್ಷರಗಳ ಪೋಣಿಸಿದರೆ-ರಂಗಿನ ಬಣ್ಣಗಳ ತುಂಬಿಸಿದರೆ ಹೆಚ್ಚಾಗುವುದು ಕಾಗದದ ಅಂದ,
ಅದ ನೋಡಿದರೆ ಈ ಮನಸಿಗೆ ಉಲ್ಲಾಸ -ಹೊಸ ಸ್ಪೂರ್ತಿ ಆನಂದ...
ಬದುಕೂ ಸಹ ಖಾಲಿ ಕಾಗದ,
ತುಂಬಿಸಬೇಕು ಯೋಚನೆಯ ದುಡಿಮೆಯಿಂದ,
ಮನಸುಗಳ ಬೆಸುಗೆಯ ಪ್ರೀತಿಯಿಂದ,
ಕಷ್ಟವಾದರೂ ಇಷ್ಟಪಟ್ಟು ಬದುಕೆಂಬ ಕಾಗದದ ಮೇಲೆ ಭರವಸೆ-ನಂಬಿಕೆಗಳನು ಧೈರ್ಯದಿಂದ ಗಟ್ಟಿಯಾಗಿ ಅಚ್ಚಾಗಿ ಗೀಚಬೇಕು,
ನೋವು,ದು:ಖ,ನಿರಾಸೆಗಳ ಅಳಿಸಬೇಕು,
ನಗುವು ತುಂಬಿ ನಲಿಯುತಿರಬೇಕು
ಸೋಲುಗಳ ಸುಧಾರಿಸಿ ಗೆಲುವಿನ ಗುರಿಯ ತಲುಪಬೇಕು,
ನಲಿವು,ಸು:ಖ,ಪ್ರೀತಿ-ಮಮತೆ,ಸಂತೋಷ,ನೆಮ್ಮದಿ ತುಂಬಿದ ಕಾಗದದ ಮೇಲಿನ ರಂಗು-ರಂಗಿನ ಚಿತ್ತಾರದ ಮುತ್ತಿನಂತೆ ಪೋಣಿಸಿರುವ ಹೊಳೆಯುವ ಅಕ್ಷರಗಳಂತೆ ಬದುಕಬೇಕು,
ಈ ಬದುಕು ಇತರರಿಗೆ ಮಾದರಿಯಾಗಬೇಕು- ಸ್ಪೂರ್ತಿ ತುಂಬಬೇಕು...
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ.
8762110543
7676106237
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ