ಶುಕ್ರವಾರ, ಫೆಬ್ರವರಿ 11, 2022

ನಿನಗಿರುವ ಭಾಗ್ಯ ಎನಗಿಲ್ಲ ಪುರುಷ (ಕವಿತೆ) - ಡಿ‌. ಶಬ್ರಿನಾ ಮಹಮದ್ ಅಲಿ.

ನಿನಗಿರುವ ಭಾಗ್ಯ
ಎನಗಿಲ್ಲ ಪುರುಷ!
ತಾಯಿಗರ್ಭದಿ ತಿರುಗಿದ
ಹಚ್ಚಹಸಿರು ತುಂಬಿದ
ಹೊಲ ಗದ್ದೆಗಳು!
ದೇಕಿ ತೆವಳಿದ
ಕಟ್ಟೆ ಅಂಗಳಗಳು!
ಎಗರಿ ಕುಣಿದ 
ಬಾಲ್ಯದಾಟಗಳು!
ನಾಚಿ ನಲಿದ 
ಯೌವನದ ಮಜಲುಗಳು!
ಊರುಗೋಲಿನ
ವೃದ್ಧಾಪ್ಯದ ದಿನಗಳು
ಎಲ್ಲವು ನಿನ್ನೂರಲ್ಲಿಯೇ!

ನನ್ನದೋ....ನನ್ನದೋ
ಅಲೆಮಾರಿ ಜೀವನ!
ತುತ್ತನಿಟ್ಟ ಹೆತ್ತವರು
ಹೊತ್ತುತಿರುಗಿದ 
ಒಡಹುಟ್ಟಿದವರು
ಗಲ್ಲಿಯಲೆಲ್ಲರೊಂದಾಗಿ
ಕುಣಿದು ಕುಪ್ಪಳಿಸಿದ
ಗೆಳಯ ಗೆಳತಿಯರು
ಇರುವ ಊರನು
ತೊರಿಬೇಕು ನಿನ ನಂಬಿ!
ಉಳಿದರ್ಧ ಜೀವನ
ನಾ ಕಾಣದ,ನನ್ನದಲ್ಲದ 
ನಿನ್ನೂರಲ್ಲಿ!!!!!!

ಮೂಕಮನದ ನನ್ನ 
ವೇದನೆ ಯಾರಿಗೆ ಹೇಳಲಿ?
ಸುಖವ ನೀಡುವ
ತನುವನಷ್ಟೆ ಬಯಸಿ
ಪೀಡಿಸಿ,ಮೋಹಿಸಿ
ಮುದ್ದಿಸುವ ನಿನಗೋ!
ಆ ಕ್ಷಣದ ಮಮತೆ ತೋರಿ
ನಿತ್ಯ ಚಾಕರಿ ಮಾಡಿಸುವ
ಕುಟುಂಬದ ಇತರರಿಗೋ!
ತೊರೆದುಬಂದ ಎನ್ನ
ಹಾಲುಂಡತವರಿಗೋ!
ದಾರಿ ತೋಚದಾಗಿದೆ !
ನಿನಗಿರುವ ಭಾಗ್ಯ
ಎನಗಿಲ್ಲ ಪುರುಷ!

 - ಡಿ‌. ಶಬ್ರಿನಾ ಮಹಮದ್ ಅಲಿ.
 ಶಿಕ್ಷಕಿ,ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

22 ಕಾಮೆಂಟ್‌ಗಳು:

  1. ಹೆಣ್ಣಾದವಳು ತವರನ್ನು ಬಿಟ್ಟು ಪತಿಯ ಗೃಹ, ಊರನ್ನು ಸೇರಿದರೂ ಆಕೆಯ ಮನದಲ್ಲಿ ತನ್ನ ತವರು, ತವರೂರ ನೆನಪು,ಬಾಲ್ಯ ಹೀಗೆ ಎಲ್ಲಾ ಮಜಲುಗಳ ವರ್ಣನೆ ಸೊಗಸಾಗಿದೆ.

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿದೆ ನಿಮ್ಮ ಅಂತರಾಳದ ನಿವೇದನೆ.... ಆದರೆ ಕೆಲವು ವಿಚಾರಗಳಲ್ಲಿ ಪುರುಷನಿಗೂ ಹಾಗೇ ಭಾಸವಾಗುತ್ತದೆ...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಸರ್..ನಿಮ್ಮ(ಪುರುಷರ) ನಿವೇದನೆಯ ಕವನ ಬರೆಯಿರಿ ಸರ್...ನಿಮ್ಮ ನೋವು ಏನೆಂದು ನಾವು ತಿಳಿಯೋಣ

      ಅಳಿಸಿ
  3. ಬೇಡ ಬಿಡಿ... ನೀವು ನಿಮ್ಮೂರಲ್ಲಿರಿ, ಅವನು ಅವನೂರಲ್ಲಿ ಆಗ!.!?
    ಓ ನಲ್ಲೆ.. ನೀನಲ್ಲೆ..ನಾನಿಲ್ಲೆ..
    ನಾನು ನೀನು.. ಅಲ್ಲಲ್ಲೇ..
    ತಿನ್ನು ಜಲ್ಲೆ... ಕಾಯಿಪಲ್ಯೆ. ... ಓಕೆ ನಾ... 😆👍🤝🌷

    ಪ್ರತ್ಯುತ್ತರಅಳಿಸಿ
  4. ತುಂಬಾ ಚೆನ್ನಾಗಿದೆ ಬರೆದಿದ್ದೀರಾ ಮೇಡಂ.ನಿಮ್ಮ ಕವನ ಹೆಣ್ಣಿನ ತವರು ಮನೆಯಲ್ಲಿನ ಬಾಲ್ಯ ಮತ್ತು ಸಹಜ ಅನುಭವಗಳನ್ನು ತೋರಿಸುತ್ತದೆ .🌹🌹🌷🌷👍👍👍

    ಪ್ರತ್ಯುತ್ತರಅಳಿಸಿ
  5. ತಮ್ಮ ಮೆಚ್ಚುಗೆಗೆ ತುಂಬು ಹೃದಯದ ಧನ್ಯವಾದಗಳು ಮೇಡಂ/ಸರ್

    ಪ್ರತ್ಯುತ್ತರಅಳಿಸಿ
  6. ಹೆಣ್ಣಿನ ಅಸಹಾಯಕತೆ ಎದ್ದು ಕಾಣುತಿದೆ, ಆದರೂ ಚನ್ನ ಹೆಣ್ಣಿನ ಪರಿಪೂರ್ಣ ಜೀವನ 👌👏👏👏👏

    ಪ್ರತ್ಯುತ್ತರಅಳಿಸಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...