ಹಿಂದಿರುವ ಜನರ ಮುಂದೆ
ಕರೆಯುವ ಮೊದಲ ಮಾನವ ನೀ ಜಗದಲ್ಲಿ
ಮಡದಿ ಮಕ್ಕಳು ಬರುವರು ಕನಸಲಿ
ಪ್ರಯಾಣಿಕರ ಸುರಕ್ಷತೆಯೂ ಸದಾ ಮನದಲ್ಲಿ
ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊರಟಿದೆ ಪಯಣ ಸಾವಿರ ಭಾಷೆಯ ಸಾವಿರ ಭಾವಗಳ ಜೊತೆಗೆ ಸಂಚಾರ ಮಾಡುವ ಜೀವಿ ನೀನು ನಿನ್ನ ಬುದ್ದಿಮತ್ತೆಗೆ ಮೆಚ್ಚಬೇಕು ಲಕ್ಷ್ಮಿಸುತನೆ
ದಣಿವರಿಯದ ಧನಂಜಯ
ಬಿಡುವಿಲ್ಲದ ಸಾಹುಕಾರ
ಬದುಕುತಿಹನು ಹರುಷದ ದಿನವಿಲ್ಲ ಹಬ್ಬ ಹರಿದಿನವಿಲ್ಲ
ಮಡದಿ ಮಕ್ಕಳ ಹರಕೆಯು ದಿನವೆಲ್ಲ ನೂರಿದ್ದರು ನೋವು ನಗುಮೊಗದಿ ಸಾಗುವ ನಯನಗಾರ
ಪಯಣಿಗರು ಇರುವರು ಜೊತೆಯಲಿ
ಅವರ ಸುರಕ್ಷತೆಯ ಧ್ಯಾನ ವೆಲ್ಲ ಮನದಲ್ಲಿ
ನಿನಗೊಂದು ನಮನ
ಪಯಣಿಗರ ಆರ್ಶಿವಾದವಿರುವುದು ಸದಾ
ಸಾಗಲಿ ಹೀಗೆ ಪಯಣ ನಿತ್ಯನೂತನ
- ಶಿವಾ ಮದಭಾಂವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ