ಭಾನುವಾರ, ಏಪ್ರಿಲ್ 17, 2022

ಧರಣಿ ಜಾತೆ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

ಧರಣಿಜಾತೆ ಸುಜನ ಸಂಪ್ರೀತೆ
 ಸುನಯನ ಸುತೆ ˌˌˌ
ಕೋಟಿ ದಿನಕರ ತೇಜದಿ
 ಹೊಳೆಯುವ ಮಾತೆ ಸೀತೆˌˌ

  ಮಿಥಿಲೆಯ ಭಾಗ್ಯವೇ
 ಜನಕನ ಪ್ರಿಯ ಪುತ್ರಿ ˌˌˌ
ನಿನ್ನ ಜನ್ಮದಿಂದ ಪಾವನ
 ವಾದಳು ಧರಿತ್ರಿ ˌˌˌ

ಸಹನೆ ವಿನಯತೆ ಪತಿಭಕ್ತಿಯ
 ಸ್ವರೂಪಿಣಿ ˌˌˌ
ಪತಿವ್ರತಾ ಧರ್ಮದಿ ನಡೆದ
ಶುಭಕಾರಿಣಿˌˌ

  ಶ್ರೀರಾಮನ ಪ್ರಾಣಸಖಿ
 ನಾರಿ ಕುಲತಿಲಕˌˌ
 ಮರೆಯದೆಂದಿಗೂ ನಿನ್ನ
 ಆದರ್ಶಗಳ ಈ ಮೂಲೋಕˌˌ

 ಸ್ವರ್ಣ ಜಿಂಕೆ ಕಂಡು ಬಯಸಿದ ಹರಿಣನಯನೆˌˌ
 ಅಶೋಕ ವನದಿ ಬಂಧಿಯಾದ
 ಕಮಲವದನೆ ˌˌ

ತನ್ನದಲ್ಲದ ತಪ್ಪಿಗೆ ವನವಾಸ
ಗೈದ ವೈದೇಹಿ ಮಾತ ˌˌ
ವಾಲ್ಮೀಕಿ ಮುನಿಯ ಅನುಗ್ರಹ
 ಪಡೆದ ತಾಯಿ ಸೀತಾ ˌˌˌ

ಯುಗವೆಷ್ಟೇ ಉರುಳಿದರು
 ನಿನ್ನ ಗುಣಗಳು ಅಮರˌˌ
 ಸಹನೆ ಧೈರ್ಯವ ನೀಡು ನಮಗೆ ˌˌ
ಬದುಕು ಬವಣೆಯ ಸಾಗರˌˌˌ

 ಕೋಟಿ ವಂದನೆ ನಿನಗೆ ಜಾನಕಿ  ಮಾತೆˌˌ
 ದಿವ್ಯ ಸ್ವರೂಪ ಲವಕುಶರ
 ಜನ್ಮದಾತೆ ˌˌ
- ಮಧುಮಾಲತಿ ರುದ್ರೇಶ್ ಬೇಲೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...