ಭಾನುವಾರ, ಏಪ್ರಿಲ್ 17, 2022

ನಾವು ಮನುಷ್ಯರು(ಕವಿತೆ) - ಗೌತಮ್ ಗೌಡ.

ನೋಡಿ ನಾವು ನಿಮ್ಮ ಹಾಗೆ
ತಾಯಿ ಯೋನಿ ಇಂದ
ಜಗತ್ತಿಗೆ ಕಾಲಿಟ್ಟವರು
ನಾವು ಮನುಷ್ಯರು
ನಿಮ್ಮಂತೆ ನಮ್ಮ ನೆತ್ತರು
ಕೆಂಪೆ
ನೀವೂ ನೊಂದಾಗ
ಕಣ್ಣೀರಿಡುವಿರಿ
ಹಾಗೆಯೇ ನಾವು.
ನಿಮ್ಮ ಬತ್ತಳಿಕೆಯ ಮಾತುಗಳು
ಹೃದಯ ಚುಚ್ಚಿದಾಗ
ಬತ್ತಿ ಹೋದ ಸಮುದ್ರವನ್ನು
ತುಂಬಿಸುವಷ್ಟು ಅತ್ತಿದೇವೆ.
ನೋಡಿ ನಾವು
ನಿಮ್ಮ ಹಾಗೆ ಮನುಷ್ಯರು
ಮಗು, ಪ್ರಾಣಿ, ಹಕ್ಕಿ
ಕೀಟ ಎಲ್ಲದರಲ್ಲೂ
ಮೊದಲಿಗೆ ಲಿಂಗ
ಹುಡುಕುವ ನೀವೂ
ನಮ್ಮನ್ನು ಮನುಷ್ಯರೆಂದು
ಕೊಂಡರೆ ಸಾಕು
ಯಾಕೆಂದರೆ ನಾವು
ಮನುಷ್ಯರು
ಗಂಡು ಹೆಣ್ಣು ಎಂಬ
ಅಸ್ಥಿತ್ವಗಳ ನಡುವೆ
ನಮ್ಮ ಅಸ್ಥಿತ್ವಗಳನ್ನು
ನೀವೂ ಒಪ್ಪುವುದಿಲ್ಲ
ಅದಕ್ಕೆ ನಾವು ಮನುಷ್ಯರು
ಎಂಬ ಅಸ್ಥಿತ್ವವನ್ನು
ಕೂಗಿ ಕೂಗಿ ಸಾರುತ್ತಿದ್ದೇವೆ
ನಾವು ಮನುಷ್ಯರು
-Gowtham Gowda

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ  9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...