ಸಮಾಜದ ಕನ್ನಡಿಯಲ್ಲಿ ಎಲ್ಲವೂ ಮುಖವಾಡಗಳೇ ಮುಖವಾಡಗಳ ಕಳಚಿ, ಪ್ರಜಾ ಹಿತವನ್ನು ಉಳಿಸಲು ಶ್ರಮಿಸಿದ ನಿರಾಧಾರಿಗಳ ಆಶಯಗಳು ಹಲವು, ಮಾಧ್ಯಮ ಒಂದು ಅಂದು ಅವರು ಕಂಡ ನವ ಸಮಾಜದ ಕನಸು ಇಂದಿಗೂ ಸಾಕಾರವಾಗಿಲ್ಲಾ.??
ಪಂಪ ರನ್ನರು, ಬುದ್ಧ ಬಸವ ಅಲ್ಲಮ ಅಕ್ಕರಂತಹವರ ಅವಿರತ ಪ್ರಯತ್ನದ ಮಾಧ್ಯಮವು ಸಮಾಜದ ಬೀಜವಾಗಿ ಕಾವ್ಯದ ರೂಪಕವಾಗಿ ಸಮಾನತೆಯ ರಂಬೆ ಕೊಂಬೆಗಳಂತೆ ಪ್ರಖರ ನೆರಳು ನೀಡಿದವು ಒಗ್ಗೂಡಿಸಿದವು ಪ್ರಜಾಪ್ರಭುತ್ವದ ಉಳಿವಿಗೆ ಸಕಲರೂ ಸಮ ಭಾಗಿಗಳಾದರು ಅಂದು.
ಆದರೆ..? ಇಂದು! ಪ್ರಶಸ್ತಿ-ಪುರಸ್ಕಾರಗಳಿಗೆ ಕಟ್ಟುಬಿದ್ದು ಸಮಾಜದ ಆಶಯಗಳಿಗೆ ದಕ್ಕೆಯಾಗುವಂತೆ ಅವುಗಳನ್ನು ಬುಡಮೇಲು ಮಾಡುವ, ಸ್ವ ಪ್ರತಿಷ್ಠೆಗೆ ಬಳಸಿಕೊಳ್ಳುವ ಕಾವ್ಯಸೃಷ್ಟಿಯ ಹುನ್ನಾರಗಳು ನಡೆಯುತ್ತಿದೆ, ಜಾತಿ ರಾಜಕಾರಣದ ಹೆಸರಿನಲಿ.
ರಾಮರಾಜ್ಯದ ಕನಸುಗಳು ಇಂದು ಛಿದ್ರವಾಗಿವೆ ಬೆರಳೇ ಣಿಕೇಯಷ್ಟು ಕಾವ್ಯಗಳು ಸದೃಢ ಸಮಾಜದ ಪ್ರತಿಬಿಂಬಗಳು, ಬರವಣಿಗೆಯಂತೆ ನಡೆಯುವವರು ಹುಡುಕಾಡ ಬೇಕಾಗಿದೆ ಇಂದು, ಸೂಕ್ಷ್ಮ ದೃಷ್ಟಿಯಿಂದ ಸಮಾಜವನ್ನು ಗ್ರಹಿಸಿ ಸವಾಲುಗಳ ಎತ್ತಿತೋರಿಸುವವರು ಹುಡುಕಾಡಬೇಕಾಗಿದೆ. ಕೊಟ್ಟ ಮಾತಿನಂತೆ ಬರಹ ಬರವಣಿಗೆ ಮಾಡುವವರ ಸಮಾಜದ ಕನ್ನಡಿಯಲ್ಲಿ ನೋಡಬೇಕಾಗಿದೆ ಇಂದು..??
ಎಲ್ಲಿಹರೆಂದು ಬೇದಕಬೇಕಾಗಿದೆ ಇಂದು..??
- ಸುನಿಲ್ ಐ ಎಸ್. ಚಿತ್ರದುರ್ಗ.
ಸಂಶೋಧನಾರ್ಥಿ
ಕನ್ನಡ ವಿಶ್ವವಿದ್ಯಾಲಯ ಹಂಪಿ
📞 : 7349177749
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ