ಭಾನುವಾರ, ಏಪ್ರಿಲ್ 17, 2022

ಓದು (ಕವಿತೆ) - ಕಾವೇರಿ ಪೋತ್ನಾಳ್.

ವಿದ್ಯೆಯೆಂಬುದು ಸರ್ವ ಅಸ್ತ್ರಗಳ ಮೂಲಬಾಣ
ಇದನ್ನರಿತರೆ  ನೀನಾಗುವೆ ಜಾಣ
ನ್ಯಾಯಾ, ನಿಷ್ಟೆ, ಪ್ರಾಮಾಣಿಕತೆಯ ಕಲಿಕೆ
ಜ್ಞಾನವೇ ನಿನ್ನ ಕೈ ಹಿಡಿಯುವುದು ಕೇಳಿಕೋ.

ಬದುಕಲ್ಲಿ ಕಷ್ಟ-ಸುಖ ಕಾಲಚಕ್ರವಿದ್ದಂತೆ
ಒಂದಾದ ಮೇಲೊಂದು ಬಂದೆ ಬರುತ್ತದೆ
ಈ ಎರಡು ಸಮರಸದೊಂದಿಗೆ ಮುನ್ನಡಿಯಲು
ವಿದ್ಯಯೇ ದೀಪದ ಬೆಳಕು ನಿ ತಿಳಿಯೋ.

ನಿನ್ನಲ್ಲಿರುವ ಹಣ,ಆಸ್ತಿ, ಐಶ್ವರ್ಯ ಕದಿಯಬಹುದು
ಅರಿವೆಂಬ ಸಂಪತ್ತನ್ನು ಯಾರು ಕಸಿಯರು
ಎದುರಾಳಿಯು ಹೆದರುವ ಪ್ರಬಲ ಆಯುಧವೇ
ಚತುರತೆಯೇ ರಾಮಬಾಣ ಮೇಧಾವಿತೆ.

ಹಿಂದಿನಿಂದಲೂ ರೂಡಿಯಿದೆ ಈ ಒಂದುಗಾದೆ
ವಿದ್ಯೆಯಿಲ್ಲದವನ ಬಾಳು ಹದ್ದಿಗಿಂತಲೂ ಕೀಳು
ಅದಕ್ಕಾಗಿ ಶ್ರಮಪಟ್ಟು ನಿ ಓದು ಸ್ನೇಹಿತೆ
ಯಶಸ್ಸು ನಿನ್ನದಾಗುವುದು ಇದು ಮಾತ್ರ ಖಚಿತ.
- ಕಾವೇರಿ ಪೋತ್ನಾಳ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...