ವಚನ ಶ್ರೇಷ್ಠರ ಸತ್ಯದ ನುಡಿ"ಕಾಯಕವೇ ಕೈಲಾಸ",
ನಾವು ಮಾಡುವ ಒಳ್ಳೆಯ ಕಾಯಕದಲ್ಲಿ ದೇವರ ವಾಸ,
ಒಳ್ಳೆಯ ಕಾಯಕ ಮಾಡುತ ಕಾಣುತಿರುವ ಸಂತಸ..
ದೇವರು-ದೇವರು,
ನಾವು ಮಾಡುವ ಒಳ್ಳೆಯ ಕಾಯಕವೇ ದೇವರು,
ಹಸಿವು ನೀಗಿಸುವ ಕಾಯಕವೆಂಬ ದೇವರು,
ಕಾಯಕವೆಂಬ ದೇವರಿಗೆ ಸದಾ ತಲೆಬಾಗಿ ಕೈ ಮುಗಿಯುತಿರು,
ಕಾಯಕ ನಿರತನಾಗಿರು-ಸದಾ ನಗುತಿರು,
ಎಲ್ಲಿಯೂ ನಿಲ್ಲದೇ ಮುಂದಕೆ ಸಾಗುತಿರು..
ಅವಶ್ಯಕತೆಯೋ ಅಥವಾ ಅನುಕರಣೆಯೋ ಇವುಗಳ ಆಯ್ಕೆಯೇ ಗೊಂದಲಮಯ,
ಅವಶ್ಯಕತೆ ಅತ್ಯಮೂಲ್ಯ,
ಅನುಕರಣೆ ಬಹುಶಃ ಅನವಶ್ಯ,
ಏನೇ ಆದರೂ ಅಚ್ಚುಕಟ್ಟಾದ ದುಡಿಮೆಯೊಂದೇ ಇವುಗಳಿಗಿರುವ ಉಪಾಯ,
ದುಡಿಮೆಯು ನೀಡುವುದು ಆಶ್ರಯ..
ಹೊತ್ತಿನ ತುತ್ತಿಗಾಗಿ ಕಾಯಕವನರಸುತ ಸಾಗುವ ಯಾತ್ರೆಯಲಿ,
ಕಷ್ಟದ ಕಾಯಕವಾದರೂ ಬಲು ಇಷ್ಟಪಟ್ಟು ಮಾಡುವಂತಿರಲಿ,
ಮಾಡುವ ಕಾಯಕ/ಕೆಲಸ ಎಂದಿಗೂ ಅಚ್ಚುಕಟ್ಟಾಗಿ ನಮಗೆ ತೃಪ್ತಿಯಾಗಿರಲಿ ನೋಡುವವರು ಮೆಚ್ಚುಗೆಯ ಸೂಚಿಸಲಿ,
ನಾವು ಮಾಡುವ ಕಾಯಕ/ಕೆಲಸ ಮನಕೆ ನೆಮ್ಮದಿಯ ನೀಡಲಿ-ಬದುಕು ಸಂಭ್ರಮಿಸುತಿರಲಿ..
ಉತ್ತಮ ಕಾಯಕದ ಕಾರ್ಯಸಾಧನೆಗಾಗಿ ಕಾಯಕದಲ್ಲಿ ಕಾರ್ಯನಿರತರಾಗಿ,
ಸದಾ ಮುಂದೆ-ಮುಂದೆ ಸಾಗಿ,
ಎಲ್ಲರನು ಪ್ರೀತಿಸಿ ಜೊತೆಯಾಗಿ ಕರೆದೊಯ್ಯುವ ನಾಯಕರಾಗಿ,
ಜನರು ಹಿಂಬಾಲಿಸಿ ಬರುವರು ತನ್ನಿಂದ ತಾನಾಗಿ..
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
8762110543
7676106237
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ