ಕನ್ನಡವೇ ಮುನ್ನುಡಿ ಕನ್ನಡವೇ ಬೆನ್ನುಡಿ ಕನ್ನಡವೇ ಕನ್ನಡಿ ಕನ್ನಡಿಗರಿಗೆ ಕನ್ನಡವೇ ಜೇನ್ನುಡಿ
ಕನ್ನಡವೊಂದೇ ಸಿರಿನುಡಿ ಕನ್ನಡವೊಂದೇ ಸಿಹಿನುಡಿ ಕನ್ನಡವೊಂದೇ ಕವಿನುಡಿ ಕನ್ನಡದ ಮನಗಳಿಗೆ ಕನ್ನಡವೊಂದೇ ತಾಯಿನುಡಿ....!!
ಕನ್ನಡವೇ ಹಸಿರು ಕನ್ನಡವೇ ಉಸಿರು ಕನ್ನಡವೇ ಹೆಸರು ಕನ್ನಡಾಭಿಮಾನಿಗಳಿಗೆ ಕನ್ನಡವೇ ತವರು
ಕನ್ನಡವೇ ಜೀವನ ಕನ್ನಡವೇ ಯವ್ವನ ಕನ್ನಡವೇ ಪಾವನ
ಕನ್ನಡ ಪ್ರೇಮಿಗಳಿಗೆ ಕನ್ನಡವೇ ಸ್ನೇಹ ಬಂಧನ....!!
ಕನ್ನಡವೇ ಪ್ರೀತಿ ಕನ್ನಡವೇ ಪ್ರೇಮ ಕನ್ನಡವೇ ಧಾಮ
ಕನ್ನಡದ ಕಂದರಿಗೆ ಕನ್ನಡವೇ ಕಾವ್ಯಧರ್ಮ
ಕನ್ನಡವೇ ಕಲ್ಪನಾ ಕನ್ನಡವೇ ಚಂದನಾ ಕನ್ನಡವೇ ಚುಂಬನ
ಕನ್ನಡದ ಕಲಾ ರಸಿಕರಿಗೆ ಕನ್ನಡವೇ ಆಲಿಂಗನಾ....!!
ಕನ್ನಡವೇ ಸ್ನೇಹಸಿರಿ ಕನ್ನಡವೇ ಕಾವ್ಯಸಿರಿ ಕನ್ನಡವೇ ನಾಟ್ಯಸಿರಿ
ಕನ್ನಡದ ರಂಗ ಕಲಾವಿದರಿಗೆ ಕನ್ನಡವೇ ಕಲಾ ಸಾಹಿತ್ಯ ಸಿರಿ
ಕನ್ನಡವೇ ಗಂಧದ ಗುಡಿ ಕನ್ನಡವೇ ಚೆಂದದ ನುಡಿ ಕನ್ನಡವೇ ಶ್ರೇಷ್ಠ ನುಡಿ ಕನ್ನಡದ ಚಿಂತಕರಿಗೆ ಕನ್ನಡವೇ ಹೃದಯ ನುಡಿ....!!
ಮರೆಯದಿರು ಕನ್ನಡ ತೊರೆಯದಿರು ಕನ್ನಡ ಜರೆಯದಿರು ಕನ್ನಡ
ಕರೆದು ಕಲಿಸದೇ ಕಳಿಸದಿರು ಕನ್ನಡ
ಬರೆದು ತಿಳಿಸದೇ ಅಳಿಸಿ ಹಾಕದಿರು ಕನ್ನಡ ಬೆಳೆಸಿ ಉಳಿಸಿ ಗಳಿಸು ಕನ್ನಡ ಧರೆಯಲಿ ಮೊಳಗಲಿ ಕಹಳೆಯೂ ಕನ್ನಡ.....!!
- ಹನುಮಂತ ದಾಸರ ಹೊಗರನಾಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ