ನೆನೆಮನವೆ ಅಣ್ಣ ಬಸವಣ್ಣನ
ತಿಳಿ ಮಗುವೇ ನೀನವರ ವಚನವನ್ನˌˌ
ಕಾಯಕವೇ ಕೈಲಾಸ ವೆಂದರು ಹಿದರುˌˌˌ
ಜಾತಿ-ಮತ ನೂಕಾಚೆ ಎಂದರವರು ˌˌˌ
ನಾರಿಯರ ಶರಣೆಯೆಂದು ಗೌರವಿಸಿದರುˌˌˌ
ಕೂಡಲಸಂಗಮನಾಥನ ಒಲಿಸಿಕೊಂಡವರುˌˌˌ
ಅಡ್ಡಿಯಾಗದು ಭವಸಾಗರ ವೆಂದೂˌˌˌ
ದೈವ ಸಾಕ್ಷಾತ್ಕಾರ ತಾ ಪಡೆಯಲದುˌˌˌˌ
ಅಣ್ಣನ ವಚನವದು ಬರಿಯ ಬರಹವಲ್ಲˌˌˌ
ಪಚನ ಗೊಳಿಸಿದರೆ ನಮ್ಮ ಬಾಳು ಸಿಹಿ ಬೆಲ್ಲ ˌˌˌ
ಯುಗಗಳೆಷ್ಟೇ ಉರುಳಿದರೂ ಯುಗ ಪುರುಷನಾದೆˌˌˌ
ಜಗ ಬೆಳಗಲು ಬಂದ ಜ್ಞಾನಜ್ಯೋತಿ ನೀನಾದೆˌˌˌ
ನೀಗಲು ಈ ಭುವಿಯ ಜ್ಞಾನಾಂಧಕಾರವನುˌˌˌ
ದೈವ ಕಳಿಸಿದ ದೇವಪುರುಷನೇ ನೀನುˌˌˌ
- ಮಧುಮಾಲತಿ ರುದ್ರೇಶ್ ಬೇಲೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ