ಶಾಲೆಗಳು ರಜೆ ಆಗ್ತಾ ಇದ್ದಂಗೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಸಂಭ್ರಮ. ಅವರ ತಲೆಯಲ್ಲಿ ಏನೇನೋ ವಿಚಾರಗಳು ಪ್ರಾರಂಭವಾಗಲು ಶುರು ಆಗುತ್ತವೆ.
ಆ ಸಂದರ್ಭದಲ್ಲಿ ಅವರು ಮನೆಯಲ್ಲಿ ಏನಾದರೂ ಒಂದು ಚಟುವಟಿಕೆ ಮಾಡ್ತಾನೆ ಇರ್ತಾರೆ. ಒಂದು ಅಥವಾ ಒಂದು ಪೆನ್ಸಿಲನ್ನು ತೆಗೆದುಕೊಂಡು ಬುಕ್ ನಲ್ಲಿ ಏನಾದರೂ ಗೀಚೋದು. ಗೋಡೆಗಳ ಮೇಲೆ ಏನಾದರೂ ಬರೆಯುವುದು. ಚಿತ್ರಗಳನ್ನು ಬಿಡಿಸುವುದು ಮಾಡುತ್ತಾರೆ. ಅದರಲ್ಲಿ ವಾಹನಗಳನ್ನು ಪಕ್ಷಿಗಳನ್ನು ನಿಸರ್ಗದ ಸೌಂದರ್ಯವನ್ನು ಬಿಡಿಸುವರು. ಇನ್ನೂ ಅನೇಕ ರೀತಿಯಲ್ಲಿ ಅವರಿಗೆ ಯಾವುದರಲ್ಲಿ ಹೆಚ್ಚಿನ ಆಸಕ್ತಿ ಇರುವುದು ಅದನ್ನು ತೆಗಿತಾ ಕೂಡುವರು. ಅದಲ್ಲದೆ ಕೆಲವು ಮಕ್ಕಳು ಮನೆಯಲ್ಲಿರುವ ಗಾರ್ಡನ್ನಲ್ಲಿ ಗಿಡಗಳನ್ನು ನೆಡುವುದು. ಮತ್ತು ಹೂವಿನ ಗಿಡಗಳನ್ನು ನೆಡುವುದು ಮೋಹನ ಹಂಪಲ ಗಿಡಗಳನ್ನು ನೆಡುವುದು ಮಾಡುವರು. ಮತ್ತು ಎಲ್ಲ ರೀತಿಯ ವಾಹನಗಳನ್ನು ಜೋಡಿಸಿಕೊಂಡು ಅದರ ಜೊತೆ ಆಟ ಆಡುವುದು. ಮತ್ತು ಇನ್ನು ಕೆಲವು ಹುಡುಗರು ತಮ್ಮ ಓಣಿಯಲ್ಲಿರುವ ಎಲ್ಲ ಹುಡುಗರನ್ನು ಕರೆದುಕೊಂಡು ಚಿನ್ನಿ ಪಿನ್ನಿ ಆಟ. ಗುಂಡ ಆಡುವುದು. ಕೋಕೋ ಆಟ ಆಡುವುದು. ಜೋಕಾಲಿ ಆಟ. ಬಿಲ್ಲು ಬಾಣದ ಆಟ ಕ್ರಿಕೆಟ್ ಆಟ. ವಾಲಿಬಾಲ್ ಆಡುವುದು ಟೆನಿಸ್ ಆಡುವುದು ಹೀಗೆ ಕಾಲ ಕಳೆಯುವರು. ಮತ್ತೆ ಕೆಲವು ಮಕ್ಕಳು ತಮ್ಮ ಸಂಬಂಧಿಗಳ ಊರಿಗೆ ಹೋಗುವುದು ಅಲ್ಲಿ ಎಲ್ಲರನ್ನೂ ಭೇಟಿಯಾಗುವುದು. ಅಲ್ಲಿ ನೋಡಬೇಕಾದ ಸ್ಥಳಗಳನ್ನು ಹೋಗಿ ನೋಡಿಕೊಂಡು ಬರುವುದು ಮಾಡುತ್ತಾರೆ.
ಆದರೆ ಇಂದಿನ ಮಾಡರ್ನ್ ಯುಗದಲ್ಲಿ ಮಕ್ಕಳ ಚಟುವಟಿಕೆಗಳು ಬೇರೆ ಬೇರೆಯಾಗಿರುತ್ತವೆ. ಶಾಲೆಗೆ ರಜೆ ಆಗ್ತಿದ್ದಂಗೆ ರಜೆಯ ಶಿಬಿರಗಳು ಕೂಡ ಪ್ರಾರಂಭವಾಗಿರುತ್ತವೆ. ಅಲ್ಲಿ 9:00 ಗಂಟೆಗೆ ಹೋದರೆ ಸಂಜೆ 5 ಗಂಟೆಯವರೆಗೆ ಅಲ್ಲಿ ಕಾಲ ಕಳೆಯುವರು. ಅಲ್ಲಿ ಅವರಿಗೆ ಸಂಗೀತ ಕ್ಲಾಸ್. ಡಾನ್ಸ್ ಕ್ಲಾಸ್. ಏರೋಬಿಕ್ಸ್. ಗಿಟಾರ್ ನುಡಿಸುವುದು. ಇವುಗಳನ್ನೆಲ್ಲ ಮಕ್ಕಳಿಗೆ ಹೇಳಿಕೊಡುವವರು. ಮತ್ತೆ ಅಲ್ಲಿ ಈಜುಕೊಳವನ್ನು ಮಾಡಿರುವರು ಅಲ್ಲಿ ಮಕ್ಕಳಿಗೆ ಈಜಾಡಲು ಹೇಳಿಕೊಡುತ್ತಾರೆ. ಮತ್ತು ಕರಾಟೆ ಆಡುವುದು ಹೇಳಿಕೊಡುತ್ತಾರೆ. ಯೋಗ ಮಾಡಿಸುವರು. ಈ ರೀತಿಯಾಗಿ ಶಿಬಿರಗಳಲ್ಲಿ ಎಲ್ಲ ತರಹದ ಚಟುವಟಿಕೆಗಳು ಇರುವವು. ಇದರಿಂದ ಮಕ್ಕಳಿಗೆ ಬೇಸಿಗೆ ರಜೆ ಕಳೆಯಲು ಅನುಕೂಲವಾಗುವುದು. ಮಕ್ಕಳು ಯಾವುದಾದರೊಂದು ಚಟುವಟಿಕೆಗಳಲ್ಲಿ ಇರುವುದರಿಂದ ಅವು ಅವರ ಆರೋಗ್ಯ ವೃದ್ಧಿಸುತ್ತದೆ. ಇದರಿಂದ ಅವರ ಜೀವನ ವಿಕಸನಕ್ಕೆ ಕಾರಣವಾಗಬಹುದು. ರಾಜಕಾರಣ ಮಕ್ಕಳನ್ನು ಯಾವಾಗಲೂ ಸುಮ್ಮನೆ ಕೊಡಲು ಬಿಡಬಾರದು. ಯಾವುದಾದರೊಂದು ಚಟುವಟಿಕೆಗಳಲ್ಲಿ ಸೇರಲು ಹೇಳಿಕೊಡಬೇಕು.
ಇದರಿಂದ ಅವರ ವ್ಯಕ್ತಿತ್ವ ವಿಕಸನ ಗೊಳ್ಳುವುದು. ಹಾಗೆ ಅವರು ಶಾಲೆಗಳಲ್ಲಿ ಅಭ್ಯಾಸದ ಕಡೆ ಹೆಚ್ಚಿನ ಶಕ್ತಿಯನ್ನು ಕೂಡವಹಿಸಬಲ್ಲರು. ಇದು ಎಲ್ಲ ತಂದೆ-ತಾಯಿಯರು ಮಾಡುವಂತಹ ಕರ್ತವ್ಯ. ಇಂದಿನ ಮಕ್ಕಳು ಬರೀ ಮೊಬೈಲ್ ಟಿವಿ ನೋಡುವುದರಲ್ಲಿ ಕಾಲ ಕಳೆಯುವರು. ಅದು ಅವರ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗೂ ಮಾನಸಿಕವಾಗಿ ಅವರು ಬೇರೆಯವರ ಜೊತೆ ಒಡನಾಟಗಳು ದೂರವಾಗುವವು. ಮೊಬೈಲ್ ಅನ್ನು ಬಳಸುವುದು ಎಷ್ಟು ಅವಶ್ಯವಿರುತ್ತದೆಯೋ ಅಷ್ಟೇ ಬೆಳೆಸಬೇಕು. ಹೆಚ್ಚಿನ ರೀತಿಯಲ್ಲಿ ಬಳಸಿದರೆ ಅವರ ಕಣ್ಣು ಹಾಳಾಗುವುದು. ತಲೆನೋವು ಬರುವುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ರೀತಿಯಾಗಿ ಮಕ್ಕಳು ಟಿವಿ ಮೊಬೈಲ್ನಲ್ಲಿ ತೊಡಗುವುದನ್ನು ಬಿಟ್ಟು ಉಳಿದ ಹೊರಗಿನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಅವರ ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಗೊಳ್ಳುವರು.
- ಸವಿತಾ ಆರ್ ಅಂಗಡಿ. ಮುಧೋಳ. ಬಾಗಲಕೋಟ ಜಿಲ್ಲೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ