ಭಾನುವಾರ, ಆಗಸ್ಟ್ 11, 2024

ಬಾಲ್ಯದ ಆ ದಿನಗಳು ‌.‌

ಬಾಲ್ಯದ ಆ ದಿನಗಳು.......
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ,ಗಣಪತಿ ಮಂದಿರ,ವಿಠಲನರುಕ್ಮಿಣಿ ಮಂದಿರ ,ದುರ್ಗವ್ವ, ಮರುಗವ್ವ ಹೀಗೆ ಹತ್ತು ಹಲವು ದೇವಸ್ಥಾನಗಳು ಭಕ್ತರ ಪಾಲಿನ ಆಶಾಕಿರಣ ಎಂದರೆ ತಪ್ಪಗಲಾರದು. ಮೋಳೆ ಗ್ರಾಮ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ತಯಾರು ಮಾಡುವ ಕಾರ್ಖಾನೆಯೆಂದರೆ ತಪ್ಪಗಲಾರದು ಇದಕ್ಕೆ ಮೂಲ ಕಾರಣ ನಮ್ಮೂರ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ ಪ್ರತಿ ವರುಷ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಕಳಿಸುತ್ತಿದೆ ಅದೇ ರೀತಿ ವಿದ್ಯೆ ಕಲಿಸಿದ ಗುರುಗಳ ಬಗ್ಗೆ ನನ್ನ ಬಾಲ್ಯದ ಬಗ್ಗೆ ಹೇಳಲು ಸಂತೋಷವಾಗುತ್ತಿದೆ. ಅಪರೂಪದಲ್ಲಿ ಅಪರೂಪದ ವ್ಯಕ್ತಿ. ವಿದ್ಯಾರ್ಥಿಗಳ ಪಾಲಿನ ಅಕ್ಷರ ಸಂತ, ಜ್ಞಾನಯೋಗಿ ಅಪ್ಪಾಸಾಹೇಬ ಧರ್ಮಣ್ಣ ಬಡಿಗೇರ ರವರು ಒಬ್ಬರು.
ಮೂಲತ: ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದವರು ಬೇರೆ ಹಳ್ಳಿಗಳಲ್ಲಿ ಸೇವೆ ಮಾಡಿ ಮೋಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಪ್ರಾರಂಭವಾಯಿತು ಅದು 3 ತರಗತಿಯಿಂದ 7ನೇ ತರಗತಿವರೆಗೆ ಉತ್ತಮ ಗುಣಮಟ್ಟದ ವಿದ್ಯೆ ನೀಡಿದರು ಕಲಿಸಿದ ಅನೇಕರು ಶಿಕ್ಷಕರಾಗಿ ,ವೈದ್ಯರಾಗಿ ,ಸೈನಿಕರಾಗಿ , ರಾಜಕಾರಣಿಗಳಾಗಿ ಕಾರ್ಯ ಮಾಡುತ್ತಿದ್ದಾರೆ. ಪ್ರತಿಯೊಂದು ವಿಷಯವನ್ನು ಮನದಟ್ಟು ಮಾಡುತ್ತಿದ್ದರು ನಮ್ಮಂಥ ದಡ್ಡ ಹುಡುಗರಿಗೆ ಉಟಾ ಬಸಿ. ಮಾಡುಸುತ್ತಿದ್ದರು ತಪ್ಪು ಮಾಡಿದರೆ ಲಾಠಿಯಿಂದ ಬಡಿಯುತ್ತಿದ್ದರು ಅವರು ಕಲಿಸಿದ ಪಾಠ ಇಂದಿಗೂ ಸಹ ಕಣ್ಣು ಮುಂದೆ ಇದೆ. ಬಡಿಗೇರ ಗುರುಗಳ ಸಹಕಾರ ದೊಡ್ಡದು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಮಾಡುತ್ತಿದ್ದರು ರೋಗ ಲಕ್ಷಣಗಳು ಕಂಡುಬಂದರೆ ವೈದ್ಯರಿಗೆ ತೋರಿಸಿ ಮನೆಗೆ ಕಳಿಸುತ್ತಿದ್ದರು ಪ್ರತಿದಿನ ಹೋಮ್ ವರ್ಕ್ ಮಾಡಬೇಕು ಇಲ್ಲವಾದರೆ ಶಿಕ್ಷೆ ನಿಶ್ಚಿತ ನನಗೆ ಸರಿಯಾಗಿ ತಿಳಿಯುತ್ತಿರಲ್ಲ ನನ್ನ ಬಗ್ಗೆ ಕಳಕಳಿ ಆದರೆ ಇವರ ಹೊಡೆತಕ್ಕೆ ಶಾಲೆ ತಪ್ಪಿಸಿ ಕೊಳ್ಳಲು ಶಾಲೆಯಲ್ಲಿ ಪುಸ್ತಕ ಬ್ಯಾಗ್ ಶಾಲೆಯಲ್ಲಿ ಇಟ್ಟು ಸಿದ್ಧೇಶ್ವರ ಗುಡಿಯಲ್ಲಿ ಮಂಗನ ಆಟ ಆಡುವುದು ಶಾಲೆ ಬಿಡುವ ವೇಳೆಯಲ್ಲಿ ಶಾಲೆಗೆ ಬಂದು ಬ್ಯಾಗ ತೆಗೆದುಕೊಂಡು ಹೋಗುವುದು. ಏಕೋ ಏಲ್ಲಿಗೆ ಹೋಗಿದ್ದಿ ಎಂದು ಕೇಳಿ ಹುಚ್ಚ ನಾಯಿಯಂತೆ ಬಡಿಯುತ್ತಿದ್ದರು ಇವರ ಬಗ್ಗೆ ಅಂಜಿಕೆ ಇತ್ತು ನನ್ನ ಶಾಲಾ ಜೀವನದಲ್ಲಿ ನಾನಾ ತರಹದ ಘಟನೆಗಳು ನಡೆಯುತ್ತಿದ್ದವು ಶಾಲಿ ಮುಂದ ಒಂದು ದೊಡ್ದ ಕರೆ ಇತ್ತು ಕುಪ್ಪೆ ಆಟ ನಡೆಯುತ್ತಿತ್ತು. ನನಗೆಶಾನು ಯೂರ ತಾಂಬೋಳಿ ಹುಡುಗನ ಜೊತೆ ಜಗಳ ಆತು ಯಾವ ಕಾರಣ ಇಲ್ಲದೇ ಜಗಳ ತೆಗೆದ. ಬಡಿದಿದ್ದ ಬಡಿಗೇರ ಗುರುಗಳಿಗೆ ಹೇಳಿದ್ದೆ ಶಾನು ಯೂರನನ್ನು ಬಡಿದರು. ಕಬ್ಬಡ್ಡಿ ಆಟ ಆಡುವ ವೇಳೆ ದಾಗ ವಿವೇಕ ಗಾಣಿಗೇರ ಹುಡುಗ ಹಲ್ಲಿನಿಂದ ಕಚ್ಚಿ ಗಾಯ ಮಾಡಿದ್ದ ಹೀಗೆ ಹತ್ತು ಹಲವು ಘಟನೆಗಳು ನೆನಪಿನಲ್ಲಿ ಉಳಿದಿವೆ. ಬಡಿಗೇರ ಗುರುಗಳು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ನೋಡುತ್ತಿದ್ದರು. ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ ಸಂಬಳಕ್ಕೆ ಆಸೆ ಪಡದೆ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ಎಂದರೆ ತಪ್ಪಗಲಾರದು ನಾವು ಕಲಿತ ಶಾಲೆ ನೋಡಿದಾಗ ಮನಸ್ಸು ಸಂತೋಷಪಡುತ್ತದೆ. ನಾವು ಕುಳಿತ ಜಾಗ ಊಟ ಮಾಡಿದ ಜಾಗ ಪರೀಕ್ಷೆಗೆ ಕುಳಿತ ರೋಲ್ ನಂ : ನೆನಪಿನ ಅಲೆಗಳಾಗಿ ಬೀಸಿ ಬಿರುಗಾಳಿಯಾಗಿಸುಳಿಯುತ್ತದೆ. ಪ್ರಮುಖವಾಗಿ ಕಂಡುಬರುವ ಶಿಕ್ಷಕ ರಾದ ಕೃಷ್ಣಾ ಮಾಸ್ತರ್ ಸಹ ಎರಡನೇಯ ತರಗತಿಯ ಶಿಕ್ಷಕರು ಶಿಸ್ತಿನ ಸಿಪಾಯಿ ಅವರನ್ನು ಸಹನೆನಪಿಸಿ ಕೊಳ್ಳಬೇಕು. ಅಕ್ಷರಗಳು ನೂರಾರು ಸಾವಿರಾರು ಆದರೆ ಬಡಿಗೇರ ಗುರುಗಳು ಕೋಟಿಗೊಬ್ಬರು ಮೇರು ವ್ಯಕ್ತಿತ್ವಕ್ಕೆ ಇವರೇ ಸಾಟಿ. ಎಂದು ಹೇಳುತ್ತಾ ಇವರಿಗೆ ಮತ್ತೊಮ್ಮೆ ಮಗದೊಮ್ಮೆ ಅಭಿನಂದನೆಗಳೊಂದಿಗೆ...
ಲೇಖಕರು :- ದಯಾನಂದ ಪಾಟೀಲ ಅಧ್ಯಕ್ಷರು :- ಭಾರತೀಯ ಕನ್ನಡ ಸಾಹಿತ್ಯ ಬಳಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...