ಶನಿವಾರ, ಅಕ್ಟೋಬರ್ 15, 2022

ಜ್ಞಾನದ ದೀಪ (ಕವಿತೆ) - ರಾಕೇಶ್.ಎಂ.

ಪ್ರಜ್ವಲಿಸಿತು ಜ್ಯೋತಿ,
ಜ್ಞಾನದ ಜ್ಯೋತಿ....
ಕತ್ತಲೆಯ ದೂಡಿ ಚೆಲ್ಲಿತ್ತು ಬೆಳಕ....

ಅಜ್ಞಾನವೆಂಬ ಅಂಧಕಾರವ ಕಳೆದು,
ಸುಜ್ಞಾನವೆಂಬ ಬೆಳಕನು ನೀಡಿ....
ತಾ ಉರಿದು ಪರರಿಗೆ ಬೆಳಕ ಹಂಚಿತು.
ಈ ಬೆಳಕ ಹಾದಿಯಲ್ಲಿ ಬೆಳೆದ ಹಲವರು
ಸಾಧನೆಯ ಶಿಖರವನೇರಿದರು.

ನಾನಾಗಬೇಕು ದೀಪದ ಹಾಗೆ
ತಾ ಉರಿದು ಪರರ ಜೀವಕೆ ಬೆಳಕ ನೀಡಬೇಕು.
ಧೀನನ ಮನೆಯಲ್ಲಿ ನಾ ಜ್ಯೋತಿಯಾಗಬೇಕು.
ಅಸಹಾಯಕನ ಮನೆಯಲ್ಲಿ ಬೆಳಕ ಚೆಲ್ಲಬೇಕು.

ಹರಿಯಬೇಕು ಜ್ಞಾನದ ಪ್ರವಾಹ, 
 ಪ್ರಪಂಚವ ಬೆಳಗಬೇಕು ನಂದಾ ಜ್ಯೋತಿಯಾಗಿ.
ಅಜ್ಞಾನದ ಕತ್ತಲೆಯ ಓಡಿಸಿ
ಜಗವ ಬೆಳಗುವ ದೀಪವಾಗಬೇಕು.

ನಾನು, 

ಅಖಂಡ ದೀಪವಾಗಬೇಕು. 
ಅನಂತ ಜ್ಞಾನವಾಗಬೇಕು. 

- ರಾಕೇಶ್.ಎಂ
ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...