ಪ್ರೀತಿಸಿದ ಹೃದಯಗಳಿಗೆ,
ಪ್ರೀತಿ ಎಷ್ಟು ಸೊಗಸಾಗಿದೆ,
ಅದರಲ್ಲಿ ನೋವು ನಲಿವು ಎಲ್ಲಾ ಅಡಗಿದೆ,
ಅದನ್ನು ಅನುಭವಿಸಿದವರಿಗೆ ತಿಳಿದಿದೆ.
ಪ್ರೀತಿ ಪದವಿದೆ ಬಲು ಚಿಕ್ಕ,
ಪ್ರೀತಿ ಮಾಡಿದವರಿಗೆ ಇಲ್ಲ ಲೆಕ್ಕ,
ಕೇಳುವುದಕ್ಕೆ ಇಂಪಾಗಿದೆ,
ಪ್ರೇಮಿಗಳಿಗೆ ಸೊಗಸಾಗಿದೆ.
ಪ್ರೇಮಿಗಳಲ್ಲಿ ಇದೆ ತುಂಟತನ,
ಪ್ರೀತಿಯಲ್ಲಿ ಕ್ಷಮೆ ಕೇಳುವ ಗುಣ,
ಕ್ಷಮಿಸುವ ಒಳ್ಳೆ ಮನಸ್ಸು,
ಇದ್ರೆ ಅದು ಪ್ರೀತಿ ಶಾಶ್ವತ.
ಪ್ರೀತಿ ಸಿಗುವುದು ಅದೃಷ್ಟವಂತರಿಗೆ,
ಪ್ರೀತಿ ಪಡೆಯುವವರು ಅದೃಷ್ಟವಂತರು,
ಪ್ರೀತಿ ಇದೆ ಬಂಗಾರ,
ಪ್ರೇಮಿಗಳಿಗೆ ಅದು ಶೃಂಗಾರ.
- ವೈಷ್ಣವಿ ರಾಜಕುಮಾರ್
ಪಿಯುಸಿ ವಿದ್ಯಾರ್ಥಿ
ಊರು:-ಕರಕ್ಯಾಳ
ತಾಲೂಕಾ:-ಔರಾದ್(ಬಾ)
ಜಿಲ್ಲಾ:-ಬೀದರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ