ಹಿಂದೂ ಧರ್ಮದ ಸಂಸ್ಕ್ರತಿ ಸಡಗರ
ನಾಡಿಗೆಲ್ಲ ಹೆಮ್ಮೆಯ ನವರಾತ್ರಿ ಸಂಭ್ರಮ
ಮೈಸೂರು ದಸರೆಗೆ ಎಲ್ಲಿಲ್ಲದ ಕೀರುತಿ
ತಾಯಿ ಚಾಮುಂಡಿಗೆ ಬೆಳಗುವ ತುಪ್ಪದ ಆರತಿ.
ಜಯ ಜಯ ಜಯಹೇ ಜಗನ್ಮಾತೆ
ಜಗದ ಜನರ ಕಾಯುವ ಪರಮೇಶ್ವರಿ
ಕರಗಳ ಮುಗಿದ ಭಕ್ತರ ಕಾಯುವ ಜಗದೀಶ್ವರಿ
ಲೋಕ ಶಕ್ತಿ ಮಾತೆ ತ್ರಿಭುವನ ಪೋಷಿಣಿ.
ದುಷ್ಟರ ಸಂಹರಿಸಿ ಶಿಷ್ಟರ ಕಾಯುವೆ
ಲೋಕದ ಮಾತೆ ಏ ಸರ್ವೇಶ್ವರಿ
ಬೆಟ್ಟದ ವಾಸಿ ನೀ ಚಾಮುಂಡೇಶ್ವರಿ
ತೋರಿದೆ ಎಲೆಲ್ಲೂ ನಿನ್ನಯ ನವರೂಪ.
ಸಿಂಹವಾಹಿನಿ ಚಾಮುಂಡಿ ಪರಮ ಪಾವನಿ
ಭಕ್ತರನ್ನು ಪೊರೆಯುವ ಚಾಮುಂಡೇಶ್ವರಿ
ನಾಗಕಂಕಣ ನಟರಾಜ ಮನೋಹರಿ
ಹಿಮಗಿರಿ ವಾಸಿನಿ ಮಹಾಶಕ್ತಿ ಮಹೇಶ್ವರಿ.
ಅಸುರ ಗುಣಗಳ ದಮನ ಮಾಡುವೆ ತಾಯಿ
ಅಭಯ ಹಸ್ತ ನೀಡಿ ಪೊರೆವ ತಾಯಿ
ಮಹಿಷಾನ ಕೊಂದ ಮಹಾತಾಯಿ
ನವದುರ್ಗೆಯ ಅವತಾರ ಮಹಾತಾಯಿ
ಗೆಲುವಿನ ದಿನದ ಆಚರಣೆಯ ವಿಜಯದಶಮಿ
ಬನ್ನಿ ಕೊಟ್ಟು ಸ್ನೇಹ ಭಾವೈಕ್ಯತೆ ಸಾರುವ ಹಬ್ಬ
ನವರಾತ್ರಿ ಶಕ್ತಿ ವೈಭವ ಸಂತಸ ಸಡಗರದ ಹಬ್ಬ
ಜಯ ಜಯ ತಾಯಿ ಜಗದ ಜನನಿ
ಬೆಳಗುವೆವು ನಿನಗೆ ತುಪ್ಪದ ಆರತಿ.
- ವಿಕಾಸ್ ಕನ್ನಸಂದ್ರ, 7760600657.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ