ಭಾನುವಾರ, ಅಕ್ಟೋಬರ್ 16, 2022

ಹಬ್ಬ ಹರಿದಿನಗಳು (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಸಾಂಪ್ರದಾಯಿಕ ಹಬ್ಬಗಳಲ್ಲಿ 
ನಾಡ ಸಂಸ್ಕೃತಿಯ ಕಹಳೆ ಉದುತಲಿ
ಹಬ್ಬ ಹರಿದಿನಗಳ ಸುರಿಮಳೆಯಲ್ಲಿ
ಮಿಂದೆದ್ದ ಜನರು ಭಾವೈಕತೆಯಲಿ 

ಹೊಸವರ್ಷದ ಪಯಣದಲಿ
ಯುಗಾದಿಯ ಹಬ್ಬ ಆಚರಣೆಯಲಿ
ಸಮನಾಗಿ ಸಿಹಿ ಕಹಿ ಅನುಭವಿಸುತಲಿ
ಶುಭಕಾರ್ಯಗಳು ಅಕ್ಷಯ ತದಿಗೆಯಲಿ

ಎತ್ತುಗಳ ಅಲಂಕಾರ ಮೆರವಣಿಗೆಯಲ್ಲಿ
ಕಾರ ಹುಣ್ಣಿಮೆಯ ಪೂಜೆ ಕರಿ ಹರಿಯುವಲಿ
ದುಡಿವ ರೈತ ಭೂಮಾತೆಗೆ ಕೈಮುಗಿಯುತಲಿ
ಈ ಹಬ್ಬ ಕೃಷಿ ರೈತರಿಗೆ ಸುಖಸಂತಸ ತರುವಲ್ಲಿ

ಎತ್ತುಗಳೇ ರೈತರಪಾಲಿಗೆ ಪಾಲಿಪ ದೇವರು 
ಉಳುವ ಭೂಮಿಯೇ ಸಲಹುವ ತಾಯಿಯು
ಮಣ್ಣಿನಿಂದ ಮಾಡಿದ ಎತ್ತುಗಳು ಪೂಜಿಸುವರಂತೆ
ಮನೆಮನೆಯಲ್ಲಿ ಜೊಡೆತ್ತುಗಳ ಬಲು ಸಿಂಗಾರವಂತೆ 

ನಾಗಪಂಚಮಿ ಹಬ್ಬ ಒಡಹುಟ್ಟಿದವರ ಶ್ರೇಯಸ್ಸಿಗಾಗಿ 
ಚಿಗಳಿ ತಂಬಿಟ್ಟು ಬೆಲ್ಲದ ನೈವೆದ್ಯ ನಾಗಪ್ಪನಿಗಾಗಿ
ಹೆಣ್ಣುಮಕ್ಕಳಿಗೆ ಜೋಕಾಲಿ ಜೀಕುವಸಲುವಾಗಿ
ಹಾರೈಸುವ ತವರಿನ ಅಂಗಳ ಬಾಲೆಯರಿಗಾಗಿ

ಮಗಳು ಮಹಾಗೌರಿಯಾದಳು ಮನೆಯಲ್ಲಿ 
ಸೊಸೆ ವರಮಹಾಲಕ್ಷ್ಮಿಯಾದಳು ಧರೆಯಲ್ಲಿ
ತಂಗಿಯ ರಕ್ಷಣೆಗೆ ನಿಂತ ಅಣ್ಣ ನೂಲ ಹುಣ್ಣಿಮೆಯಲಿ
ಸಿಂಗರಿಸಿ ಪೂಜಿಸಿಹರು ಶ್ರೀಕೃಷ್ಣನನ್ನು ಜನ್ಮಾಷ್ಟಿಮಿಯಲ್ಲಿ

ಗಣೆಶ ಚತುರ್ಥಿಯ ಗಣಪನ ಆಗಮನ
ಮೊದಕ ಕಜ್ಜಾಯ ಗಣಪಗೆ ಅರ್ಪಣ
ವಿಘ್ನಗಳ ಅಳಿಸಿ ಶುಭಹಾರೈಸುವ ಇತನ ಮನ 
ಗಣಪನೆಂದರೆ ಮಕ್ಕಳಿಗೆ ಪಂಚಪ್ರಾಣ

ಬಂದಿಹಳು ಹರ್ಷದಿ ಮನೆಮನೆಗೆ
ನವರಾತ್ರಿಯ ನವದಿನಗಳ ಕರೆಗೆ
ಆದಿಶಕ್ತಿಯ ಅವತಾರಗಳ ಪೂಜೆಗೆ
ಕಷ್ಟವ ಅಳಿಸಿ ನಿಂತಿಹಳು ದೇವಿ ಬೆನ್ನಿಗೆ 

ಬೆಳಕು ಚೆಲ್ಲುವ ದೀಪಾವಳಿ ಹಬ್ಬ
ಮಹಾಲಕ್ಷ್ಮಿಯ ನೆನೆವು ಮನೆಯತುಂಬ
ಶ್ರೀದೇವಿಯ ಸುಖಸಮೃದ್ಧಿಯ ಬೆಳಕ
ಮನೆಮನೆಗಳ ಮುಂದೆ ದೀಪಗಳ ಥಳಕ

ಹುಲ್ಲುಲ್ಲಿಗೇ ಚಲಾಂಬರಿಗೇಯ ಕೂಗ
ಹೊಲದ ತುಂಬ ಚೆಲ್ಲಿದೆ ಖಾದ್ಯದ ಚರಗ
ಪಾಂಡವರು ಕುಂತಾರ ಬನ್ನಿಯಮರ ಕೆಳಗ
ಬೆಳೆದ ಪೈರಿನ ನಡುವೆ ಪೂಜೆಯ ಮೆರಗ

ಕೂಡಲ ಸಂಗಮದಲಿ ಭಕ್ತಜನರ ಸಂಗ
ಸಂಕ್ರಮಣದಲಿ ಕಳೆದಾವ ಕರ್ಮತುಂಬ
ಊರೂರ ಗುಡಿಯಲ್ಲಿ ಮನೆದೇವರ ಪೂಜೆ
ಎಳ್ಳು ಬೆಲ್ಲ ಹಂಚಿ ಕೈಮುಗಿದಾರು ಇಳೆಸಂಜೆ

ಹೊಳಿ ಹುಣ್ಣಿಮೆಯ ಓಕುಳಿ
ಜಾತಿ ಮತ ಪಂಥ ಅಳಿದ ಸವಕಳಿ
ಬಣ್ಣಬಣ್ಣಗಳಲ್ಲಿ ಮುಳಿಗೆದ್ದ ಜಂಗುಳಿ
ಸಂಜೆಗೆ ಕಾಮ ದಹನದ ಹಾವಳಿ 

ಬಸವ ಜಯಂತಿ ವಿಶ್ವಕ್ಕೆ ಶಾಂತಿ
ವಚನಗಳಿಂದ ಕಳೆವ ಮನದ ಭ್ರಾಂತಿ
ತನು ಶುದ್ಧ ಮನ ಶುದ್ಧತೆಗೆ
ಶರಣ ಶರಣೆಯರ ಬಸವ ಸಂಕ್ರಾಂತಿ

ಹಲವು ಬಗೆಯ ವೇಷಭೂಷಣ 
ಅದರಲ್ಲಿ ಹಲವು ಹಬ್ಬಗಳ ಆಚರಣ
ಸಂಪ್ರದಾಯದ ಹಾದಿಯಲಿ ಪಯಣ
ನಾಡಲಿ ಹಬ್ಬಹರಿದಿನಗಳ ವೈಭವೀಕರಣ 



-  ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...