ಕಣ್ಣಿನುದ್ದಕ್ಕೂ ನೋಡಿದರೆ ಕಾಣುವುದು ನಿಮಗೆ ಹಸಿರು ವನ,
ಸುಖ, ದುಃಖಗಳನ್ನು ಸರಿಸಮಾನವಾಗಿ ಸ್ವೀಕರಿಸಿ ಜೀವನ
ನಡೆಸುತ್ತಿದ್ದಾರೆ, ಹಿರೇಹೊನ್ನಿಹಳ್ಳಿ ಜನ.
ಕಲ್ಲು ಮುಳ್ಳುಗಳನ್ನು ಬುನಾದಿ ಮಾಡಿಕೊಂಡು ನಿಂತಿದೆ ಬಾಹುಬಲಿಯಂತೆ ಗುಡ್ಡದ ಮೇಲೆ,
ಕಾನನದ ನಡುವೆ ನವಿಲು, ನರಿಗಳ ಮಧುರ ಸ್ವರ ಕೇಳಿ
ಮೈಮರೆತು ನಿಂತಿದೆ, ಕಿ.ರಾ.ಚೆನ್ನಮ್ಮ ವಸತಿ ಶಾಲೆ.
ನನ್ನ ಸುಂದರ ಶಾಲೆಯ ಮುಖ್ಯ ಪ್ರವೇಶ ದ್ವಾರದಲ್ಲಿದೆ
“ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಫಲಕ.
ಜ್ಞಾನ ಸಂಪಾದಿಸಿಕೊಂಡರೆ, ಸಮಾಜದಲ್ಲಿ ಗೌರವ ಸಿಗುವುದು
ಕೊನೆಯತನಕ.
ಇವರೇ ನಮ್ಮ ಶಾಲೆಗೊಂದು ಕಳಶಪ್ರಾಯ, ಅಸಿಪ್ ಅಲಿ ನದಾಪ್ ಸರ್ ಮಹಾಭಾರತದ ಧರ್ಮರಾಯ.
ಇವರ ಮುಖದಲ್ಲಿರುವುದು ಸದಾ ಬುದ್ದನಲ್ಲಿರುವ ಹುಣ್ಣಿಮೆಯ ಚಂದ್ರನಂತ ಕಳೆ,
ತೌಫೀನ್ ಮೇಡ್ಂರವರನ್ನು ಕಂಡಾಗ ನಾಚುವುದು ನಮ್ಮ ಇಳೆ.
ವಿಜ್ಞಾನ ವಿಷಯ ಅಂದರೆ ಇವರಿಗೆ ಅಚ್ಚುಮೆಚ್ಚು ,
ಆದರೆ ಆಸ್ಮಾ ಮೇಡ್ಂ ಕನ್ನಡ ಮಾತನಾಡಲು ಕಲಿಯಬೇಕಿದೆ
ಹೆಚ್ಚುಹೆಚ್ಚು.
ಗಾನಕೋಗಿಲೆಗೆ ಪ್ರತಿಸ್ಪರ್ಧೆ ನೀಡುವ ಕಂಠ ಈ ಶಾಲೆಯಲ್ಲಿ ಉಂಟು,
ಸೀಮಾ ಮೇಡ್ಂರವರಿಗೆ ಕಿ.ರಾ.ಚೆ. ವಸತಿ ಶಾಲೆಗೆ ಇದೇ
ಬಹಳ ದಿನದ ಜನುಮ ಜನುಮದ ನಂಟು.
ಶಾಲೆಗೆ ಒಬ್ಬರಾದರು ಶಿಸ್ತಿನ ಸಿಪಾಯಿ ಇರಬೇಕ್ರಿ ,
ತಪ್ಪು ಮಾಡಿದವರಿಗೆ, ಆಶಾಮೇಡ್ಂರವರು
ಮಾಡುವರು ಆಗಾಗ ರಿಪೇರಿ. ಬಂದವರಿಗೆ ಹೇಳಿಕೊಡುವರು ಇವರು
ಉಚಿತ ಕಂಪ್ಯೂಟರ್ ಶಿಕ್ಷಣ, ಕಷ್ಟ ಅಂತಾ ಅಂದಾಗ
ಮಂಜುಳಾ ಮೇಡ್ಂರವರು ಸಹಾಯ ಮಾಡುವರು ತಕ್ಷಣ.
ಇವರು ಕ್ರೀಡೆ ಆಡಲು ನಿಂತರೆ ನಿಲ್ಲುವುದು ಎದುರಾಳಿ ಉಸಿರು ,
ಐ.ಎಮ್. ಕಿಲ್ಲೇದಾರ್ ಸರ್ ಎಂಬುದು ಇವರ ಹೆಸರು.
ಮಕ್ಕಳಿಗೆ ಬಹಳಷ್ಟು ಮಾಡುವರು ಇವರು ಪ್ರೀತಿಯಿಂದ ಮುದ್ದು ,
ಮಕ್ಕಳನ್ನು ಶಾಂತಮಾಡಲು ನಮ್ಮ ಶಾಲೆಯ ವ.ನಿ.ಪಾಲಕರಾದ ರೇಖಾ ಮೇಡ್ಂ ಬರುವರು
ಕುಳಿತಲ್ಲಿಂದ ಎದ್ದು ಬಿದ್ದು.
- ಕೊಟ್ರೇಶ ನಡುವಿನಮನಿ.
ಅತಿಥಿ ಶಿಕ್ಷಕರು ಕಿ.ರಾ.ಚೆ.ವಸತಿ ಶಾಲೆ ಹಿರೇಹೊನ್ನಿಹಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ