ಶನಿವಾರ, ನವೆಂಬರ್ 26, 2022

ನಗು ಮುಖದ ಚಿತ್ರಣ (ಕವಿತೆ) - ಮಣಿಕಂಠ ಗೌಡ.

ಕಳೆದಷ್ಟು ದಿನಗಳಲ್ಲಿ ಎಂದೂ ಮರೆಯಲಾಗದ ಅನುಭವ
ಬೇರೆತ ಮನಸುಗಳಲ್ಲಿ ಎಂದೂ ಕಂಡರಿಯದ ಭಾವ
ಬದುಕಿನುದ್ದಕ್ಕೂ ಕಾಡುವ ಕಾತುರದ ಪ್ರಶ್ನೆಗಳು
ಪಯಣದುದ್ದಕ್ಕೂ ಕಾಡುವ ನೆನಪಿನ ಹೆಜ್ಜೆಗಳು
ಇವೆಲ್ಲದರ ನಡುವೆ ಇರುವಷ್ಟು ದಿನ ನಗುಮುಖದ ಚಿತ್ರಣ

ಅವರಿವರ ನೋಡಿ ಕಲಿಯುವ ಬಯಕೆ
ಕಲಿತಷ್ಟು ಏಕೋ ಕಡಿಮೆಯಾಗುತ್ತಿದೆ ಈ ಜೀವಕೆ
ಮುಖವಾಡದಿ ನಾಟಕದ ಈ ಜಗದೊಳು
ನನ್ನದಾವ ಪಾತ್ರವೋ...
ಹಣೆಬರಹವ ಅವನೇ ಬರೆದಿರುವನಂತೆ
ಹಗಲಿರುಳು ಚಿಂತಿಸುವ ಮನಸು ಅದೆಷ್ಟು ಮೂರ್ಖವೋ...
ಇವೆಲ್ಲದರ ನಡುವೆ ಇರುವಷ್ಟು ದಿನ ನಗುಮುಖದ ಚಿತ್ರಣ

ಯಾವುದೋ ನೆಪದಲ್ಲಿ ಬುದ್ದಿ ಹೇಳೋಮಂದಿ ನೂರಾರು
ಚಿಂತಿಸಿದಷ್ಟು ಬಗೆಹರಿಯದ ಸಮಸ್ಯೆಗಳು ಹಲವಾರು
ಈಡೇರದ ಕನಸುಗಳು ಒಂದೊದಾಗಿ ಸತ್ತಿವೆ
ಕೊಂಡೋಯ್ಯಬೇಕಾಗಿದೆ ಯಾವುದಾದರೊಂದು ಸುಡುಗಾಡಿಗೆ
ಎಲ್ಲದಕೂ ಕಂಬನಿಯ ದಾರೆ ಎರೆಯುತ
ಕಣ್ಣೀರ ಬಾವಿ ಬತ್ತಿದೆ
ನಾನ್ಯಾರ ಕೇಳಲಿ ಬಾಯಾರಿದ ಈ ಹೃದಯಕೆ
ಕಂಬನಿಯ ನೀಡಲು ಬಾಡಿಗೆ
ಇವೆಲ್ಲದರ ನಡುವೆ ಇರಲಿ ಇರುವಷ್ಟು ದಿನ ನಗು ಮುಖದ ಚಿತ್ರಣ.

- ಮಣಿಕಂಠ ಗೌಡ
ಉತ್ತರ ಕನ್ನಡ ಜಿಲ್ಲೆ
ಶಿರಸಿ, ಮಂಜುಗುಣಿ
9482079553.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...