ಕನ್ನಡಿಗರ ಮನೆ ಮಾಳಿಗೆ ಮೇಲೆ
ಹಾರುತಿದೆ ಕನ್ನಡದ ಧ್ವಜ
ನವೆಂಬರ್ ೧ರ ಸಂಭ್ರಮದಲ್ಲಿ
ಅರಿಸಿನ ಕುಂಕುಮ ಬಣ್ಣದ ನಾಡಧ್ವಜ "ಪ"
ಕೋಟಿಕಂಠದೀ ಗಾನಸುಧೆಯಲಿ
ಕೂಡಿ ಹಾಡುವಾ ಕನ್ನಡಿಗರು
ಕನ್ನಡ ಮಾತೆ ಭುವನೇಶ್ವರಿ ದೇವಿಯ
ಉತ್ಸವ ಆಚರಣೆ ಮನೆ ಮನೆಗೂ "೧"
ಹಲವು ನದಿಗಳು ತುಂಬಿ ಹರಿಯುವ
ಸೊಬಗಿನ ನಾಡಿದು ಕನ್ನಡವು
ಗಂಧದ ನಾಡು ಚಿನ್ನದ ಬೀಡು
ನಮ್ಮ ಹೆಮ್ಮೆಯ ನಾಡುಯಿದು(೨)
ಸಂತ ಮಹಾಂತರು ಹುಟ್ಟಿದ ಪವಿತ್ರ
ಪುಣ್ಯದ ನಾಡಿದು ಕನ್ನಡವು
ಕಲೆ ಸಂಸ್ಕೃತಿ ವಾಸ್ತು ಶಿಲ್ಪಕೆ
ಹೆಸರುವಾಸಿ ಈ ಕರ್ನಾಟಕವು"೩"
ಗಡಿನಾಡಿನಲಿ ತಂಟೆಯ ತೆಗೆದರೆ
ಗರ್ಜಿಸಿ ಗುಡುಗುವ ಕನ್ನಡಿಗರು
ಹಲವು ಭಾಷೆಗಳ ಒಲವು ಇದ್ದರೂ
ಮಾತನಾಡುವ ಭಾಷೆಯು ಕನ್ನಡವು
ನಮ್ಮ ನಾಡಿದು ಕನ್ನಡವು "೪"
- ಹನಮಂತ ಬಿ ಕುರಬರ.
ಸಾ:ಬಳ್ಳಿಗೇರಿ.
ತಾ:ಅಥಣಿ.ಜಿ:ಬೆಳಗಾವಿ.
ಮೊ:9632189967
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ