ಆ ಹಳ್ಳ ಆ ತೋಟ
ಇಳಿ ಸಂಜೆಯ ಬಾನಿನ ಮನಮೋಹಕ ನೋಟ
ಶಾಲೆಯಲ್ಲಿ ಕಲಿತ ಪಾಠ
ಚಿಣ್ಣಿದಾಂಡ ಲಗೋರಿ
ಜೋತೆಗೂಡಿ ಆಡಿದ್ದ ಆಟ
ನೆನಪಿದೆಯಾ ಗೆಳೆಯಾ ಬಾಲ್ಯದ ಸಮಯ !!೧!!
ಆಗತಾನೆ ಮೂಡುತ್ತಲಿದ್ದ ಎಳೆಮೀಸೆ
ಒಳ ಒಳಗೆ ಚಿಗುರುತ್ತಿದ್ದ ಹೊಸ ಆಸೆ
ಕಣ್ಣಿಗೆ ಬಿದ್ದಿದ್ದಳು ನೀಲಿ ಬಣ್ಣದ ಫ್ರಾಕಿನಲಿ
ಮೊದಲಸಲ ಬಿದ್ದಿದ್ದೆಯಲ್ಲಾ ಗಳೆಯಾ ಲವ್ವಿನಲಿ
ಹೊಸ ಹೊಸ ಹೆಸರಿನಿಟ್ಟು ರೇಗಿಸಿದ್ದೆವಲ್ಲಾ ಅಳಿಸಿದ್ದೆವಲ್ಲಾ
ಅವಳು ನನ್ನವಳು ಇವಳು ನಿನ್ನವಳೆಂದು
ಅವರಿಗೆ ತಿಳಿಯದೆ ಹಂಚಿಕೊಂಡಿದ್ದೆವಲ್ಲಾ
ನೆನಪಿದೆಯಾ ಗೆಳೆಯಾ ಆ ಸ್ಕೂಲಿನ ಸಮಯ !!೨!!
ಖೋಖೋ ಕಬಡ್ಡಿ ವಾಲಿಬಾಲ್
ಒಬ್ಬಬ್ಬರದು ಒಂದೊಂದರಲ್ಲಿ ಎತ್ತಿದ ಕೈ
ಗಾಯ ಮಾಡಿಕೊಂಡಿದ್ದೆವಲ್ಲಾ ಮೈ ಕೈ
ಚಿತ್ರಕಲೆ ಭಾಷಣ ಗಾಯನ
ಒಬ್ಬಬ್ಬರದು ಒಂದೊಂದು ಪ್ರದರ್ಶನ
ಸಿಕ್ಕರೆ ಸಾಕಿತ್ತು ಪ್ರಶಸ್ತಿ ಪುರಸ್ಕಾರ ಸಮ್ಮಾನ ಸಮಾಧಾನಕರ ಬಹುಮಾನ
ನೆನಪಿದೆಯಾ ಗೆಳೆಯಾ ಆ ಆಟದ ಸಮಯ !!೩!!
ಒಂದೊಮ್ಮೆ ವಿಚಾರಿಸಿದರೂ ಶಿಕ್ಷಕರೊಬ್ಬರು
ಭವಿಷ್ಯದಲ್ಲಿ ಎನಾಗುವಿರಿ ನೀವೆಲ್ಲರೂ
ಐಎಎಸ್ ಐಪಿಎಸ್ ಪೋಲಿಸ
ಡಾಕ್ಟರ ಇಂಜನೀಯರ ಎನೆನೊ ಹೇಳಿದ್ದೆವಲ್ಲಾ
ಪರೀಕ್ಷೆಯ ಸಮಯದಲ್ಲಿ ಒಬ್ಬರಿಗೊಬ್ಬರು
ಹೇಳದೆ ರಾತ್ರಿಯಿಡಿ ಓದಿದ್ದೆವಲ್ಲಾ ಮುಗಿದ ಮೇಲೆ ನಿರಾಳವಾಗಿದ್ದೆವಲ್ಲಾ
ನೆನಪಿದೆಯಾ ಗೆಳೆಯಾ ಈ ಅಧ್ಭುತವಾದ ಸಮಯ !!೪!!
ಕಾಲ ಉರಳಿತು ಸಮಯ ಕಳೆಯಿತು
ಬದುಕಿನಲ್ಲಿ ಬದಲಾವಣೆ ಬಂತು
ಜೊತೆಗೆ ನೋವು-ನಲಿವು ಜವಾಬ್ಧಾರಿಯ ತಂತು
ಜೊತೆಗಿದ್ದವರಲ್ಲಿ ಕೆಲವರು ಸ್ಕೂಲ್ ಬಿಟ್ಟರು ಮದುವೆಯಾಗಿ ಹೋದರು
ಮುಂಬೈ ಬೆಂಗಳೂರು ಚನ್ನೈಗೆ ಹೋದರು
ಯಾರೋ ಡಿಗ್ರಿ ಮುಗಿಸಲು ಇನ್ಯಾರೋ ಮನೆಯ ಉಸ್ತುವಾರಿ ಹೊರಲು
ನೆನಪಿದೆಯಾ ಗೆಳೆಯಾ ಬದುಕು ಬದಲಾದ ಸಮಯ !!೫!!
ಇಂದು ನೀನು ಫೋನು ಮಾಡುವೆ
ಅವಳೆಲ್ಲಿ ಅವನೆಲ್ಲಿ ನೀನೆಲ್ಲಿ ಎಂದು ಕೇಳುವೆ
ಹಳೆದ್ದನೆಲ್ಲಾ ನೆನಪಿಸಿಕೊಳ್ಳುತ್ತಿರುವೇ
ಒಬ್ಬನೆ ನಗುತ್ತಿರುವೇ ಅಳುತ್ತಿರುವೇ
ನಿನ್ನಷ್ಟಕ್ಕೆ ನೀನೇ ಮೆಲಕು ಹಾಕುತ್ತಿರುವೇ
ನಿಜವಲ್ಲವೆ ಗೆಳೆಯಾ ಇದು ಎಂದಿಗೂ ಮರೆಯಲಾಗದ ಸಮಯ !!೬!!
- ಮದನ ಪಾಟೀಲ, ಸಂಗ್ಲಿ, ಮಹರಾಷ್ಟ್ರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ