ಸಂಕ್ರಾಂತಿ ಬಂದಿದೆ ಹರುಷವ ತಂದಿದೆ.
ಪಾರಂಪರಿಕವಾಗಿ ಸಂಭ್ರಮದಿ ಆಚರಿಸುವೆವು.
ಎಲ್ಲೆಡೆಯೂ ಎಳ್ಳು ಬೆಲ್ಲವ ಹಂಚುತಲಿ,
ರಂಗುರಂಗಿನ ಹಬ್ಬದ ಸಿಹಿಯನ್ನು ಮೆಲ್ಲುತ್ತಲಿ.
ಎಲ್ಲೆಡೆಯೂ ರೈತರಿಗೆ ಸುಗ್ಗಿಯು ನೋಡು.
ಹಿಗ್ಗುತಲಿ ನಲಿಯುತಲಿ ಹಿರಿಯರ ಮಾರ್ಗದಿ,
ಆಚರಿಸುವ ನೋಡು ಸುಗ್ಗಿಯ ಹಬ್ಬವು.
ಹೆಣ್ಣು ಮಕ್ಕಳಿಗೆ ಇದು ಸಿಂಗಾರದ ಹಬ್ಬವು.
ವರುಷದ ಮೊದಲನೆಯ ಮಾಸದಲ್ಲಿನ ಹಬ್ಬವಿದು ಎಲ್ಲ ಮಕ್ಕಳು ಸಂತೋಷದಿ,
ಕುಣಿಯುತ ಸಂಭ್ರಮಿಸೋ ಚೆಂದದ ಹಬ್ಬ. ಮನೆಮನೆಗೂ ಹಂಚುತ ಸಿಹಿಯ ಕಬ್ಬ.
ಸಂತಸದಿ ಎಲ್ಲರೂ ಸಂಭ್ರಮಿಸೇ ಕೂಡಿ,
ಎಲ್ಲೆಡೆಯೂ ಒಳಿತಿನ ಬೆಳಕು ಮೂಡಿ.
ಹಿರಿಯರು ತೋರಿದ ಹಬ್ಬವು ನೋಡಿ,
ಎಲ್ಲರೂ ಖುಷಿಯಾಗಿ ಬಾಳುವಂತೆ ಮಾಡಿ.
- ಶ್ರೀಮತಿ ಪ್ರತಿಮಾ. ಹೆಚ್. ಎಸ್., ಶಿಕ್ಷಕಿ, ಹಾಸನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ