ಸೂರ್ಯನ ಕರೆಗೆ ಓ..ಗೊಡುತ,
ಹೊಸತುಗಳ ಆಲಂಗಿಸುತ,
ಬದಲಾವಣೆಗಳ ಸ್ವೀಕರಿಸುತ
ಬನ್ನಿ ಸಂಕ್ರಾಂತಿಯ ಆಚರಿಸೋಣ.
ನಿತ್ಯವೂ ಸತ್ಯದಲೆ ಕಳೆಯುತ,
ಎಳ್ಳುಬೆಲ್ಲವ ತಿನ್ನುತ,
ಸವಿಸವಿಯಾಗಿ ಮಾತನಾಡುತ
ಬನ್ನಿ ಸಂಕ್ರಾಂತಿಯ ಆಚರಿಸೋಣ.
ದ್ವೇಷ-ಅಸೂಯೆ, ದುಃಖ-ದುಮ್ಮಾನ,
ಮೇಲು-ಕೀಳು, ನಾನು ನೀನೆಂಬ
ಅಹಂಭಾವವ ಗಾಳಿಗೆ ತೂರುತ,
ನಲಿಯುತ, ಹಾಡುತ, ಪಟವನು ಹಾರಿಸುತ
ಬನ್ನಿ ಸಂಕ್ರಾಂತಿಯ ಆಚರಿಸೋಣ.
- ನಾಝೀಮಾ, ಹಾಸನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ