ಮಂಗಳವಾರ, ಫೆಬ್ರವರಿ 21, 2023

ನಿಮಗಿದು ಬೇಕಿತ್ತಾ ಶಿವನೆ (ಕವಿತೆ) - ಬಸವರಾಜ ಮೈದೂರ ಚಿಕ್ಕಮರಳಿಹಳ್ಳಿ.

ಅವನು ಅಸವಾಲದ
ದೇವರು ಅಂತಿವಿ..

ಅದೆ ದೇವಸ್ಥಾನದಲ್ಲಿ ನಮ್ಮನ್ನು 
ಕಾಯಲು ಸಿ ಸಿ ಕ್ಯಾಮೆರಾ ಇಡತಿವಿ..

ಹೆಣ್ಣು ಗಂಡು 
ಎರಡೇ ಜಾತಿ ಅಂತಿವಿ..

ಊರ ತುಂಬಾ ನೂರೆಂಟು 
ಜಾತಿಯ ಹುಟ್ಟು ಹಾಕ್ತಿವಿ..

ಸರಾಯಿ ಊರಿಗೆ 
ಮಾರಕ ಅಂತಿವಿ..

ಅದೆ ಸರಾಯಿನ ಅಗಸಿ ಬಗಸಿ
ಬಾಗಿಲಲ್ಲಿ ತಂದು ಇಡತಿವಿ.. 

ನಾವು ಇಲ್ಲಿಂದ ಏನನ್ನೂ 
ತೊಗೊಂಡು ಹೋಗಲ್ಲ ಅಂತಿವಿ..

ಕದ್ದು ಮುಚ್ಚಿ ಕೋಣೆಯಲ್ಲಿ 
ದುಡ್ಡಿನ ಬಣವಿ ವಟ್ಟತವಿ..

- ಬಸವರಾಜ ಮೈದೂರ ಚಿಕ್ಕಮರಳಿಹಳ್ಳಿ, 7259326361.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...