ಲೇ ಮಾನವಾ ಬಂದೇ ಬಿಟ್ಟೀಯಾ ಈ ಜನುಮಕ
ನೀನು ಲೋಕವನ್ನೇ ಆಳುತಿದೆಯಲ್ಲಾ ನಿನ್ನ ಸ್ವಾರ್ಥಕ
ಮಾಡುವುದನ್ನೇ ಮರೆತು ಬಿಟ್ಟೆಯಲ್ಲಾ ದೇವರ ಕಾಯಕ
ಮಾನವೀಯತೆ ಎಂಬುದು ಇಲ್ಲಾ ಈ ಜನಕ
ಎಷ್ಟು ಹೇಳಿದರು ಅಷ್ಟೇ ಇದೆ ನಿನ್ನ ಕರ್ಮಕ
ಒಳ್ಳೆಯವನಾಗಿ ಬಾಳು ಈ ಜಗಕ
ಅಳೆಯದಿರು ಎಂದಿಗೂ ಆಸ್ತಿ ಪಾಸ್ತಿ ಸಿರಿತನದ ಕನಕ
ಚಿರುರುಣಿ ಯಾಗಿರು ಸದಾ ಬಡವರ ಪಾಲಕ
ದುಡಿಸಿಕೊಳ್ಳುವವರನ್ನು ಕೊಲ್ಲದಿರು ನೀ ಮಾಲೀಕ
ತಳ್ಳದಿರು ಯಾರನ್ನು ಪಾತಾಳಕ
ಕರೆದರೂ ಓ ಎನ್ನದಿರುವನು ಆ ನಾಯಕ
ಕಳೆದುಕೊಳ್ಳುವೆ ಎಲ್ಲವನು ವಯಸ್ಸಾದ ಬಳಿಕ
ಸೇರುವೆ ಒಂದು ದಿನ ಆ ಸ್ವರ್ಗಕ
ಎಲೆ ಮಾನವಾ ಏನೆಂದು ಹೋಗಳಲಿ ನಿನ್ನ ನಾಮಕ
ಇದುವೇ ಈ ಪ್ರಪಂಚದ ನಾಟಕ...
- ಕಾಜಲ ಆನಂದ ಹೆಗಡೆ, ನವಲಿಹಾಳ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ