ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿ
ಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂ
ಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll
ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ ಸಹಿಸಿಕೊಂಡು
ಸುಮ್ಮನಿರು ನೀನು ಎಲ್ಲರೂಳಗೊಂದಾಗಿ ಮಂಕುತಿಮ್ಮನಂತೆ
ಸುಮ್ಮನಿರು ನೀನು ದಬ್ಬಾಳಿಕೆಯನು ಸಹಿಸಿಕೊಂಡು
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll
ಸುಮ್ಮನಿರು ನೀನು ನಿನ್ನ ಮಾತಿಗೆ ಬೆಲೆ ಸಿಗುವವರೆಗೂ
ಸುಮ್ಮನಿರು ನೀನು ಬೇರೆಯವರ ಮಾತಿಗೆ ಕಿವಿ ಕೆಳದಂತೆ ಕಿವುಡನಾಗಿ
ಸುಮ್ಮನಿರು ನೀನು ನಿನ್ನ ಬಗ್ಗೆ ಮಾತಾಡಿದ ಎಲ್ಲರಿಗೂ ಉತ್ತರ ಸಿಗುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll
ಸುಮ್ಮನಿರು ನೀನು ಮಾತನಾಡುವವರ ಮಾತು ಮುಗಿಯುವವರೆಗೂ
ಸುಮ್ಮನಿರು ನೀನು ನಿನ್ನನ್ನು ಎಲ್ಲರೂ ಗೌರವದಿಂದ ಕಾಣುವವರೆಗೂ
ಸುಮ್ಮನಿರು ನೀನು ನಿನ್ನನ್ನು ಅತಿಥಿಯಾಗಿ ಆಹ್ವಾನಿಸುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll
ಸುಮ್ಮನಿರು ನೀನು ಮಾತನಾಡುವವರ ಮಾತು ಮುಗಿಯುವವರೆಗೂ
ಸುಮ್ಮನಿರು ನೀನು ನಿನ್ನ ಮೌನದ ಹಿಂದೆ ಇರುವ ಮಹತ್ವ ತಿಳಿಯುವವರೆಗೂ
ಸುಮ್ಮನಿರು ನೀನು ಸಾಧನೆಯ ನೋಡಿ ಸಿಳ್ಳೆ ಹಾಕಿ ಶಾಲು ಹೊದಿಸುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll
- ಬಸವರಾಜ್ ಎಚ್. ಹೊಗರನಾಳ.
Super bro 💐💫👆👆
ಪ್ರತ್ಯುತ್ತರಅಳಿಸಿ