ಢಂ ಢಂ ಬೋಲೋ ಢಮರುಗ ಶಿವನುˌ
ಗಿರಿಜಾ ರಮಣ ನಂದಿವಾಹನ ಶಿವನುˌ
ಭಕ್ತಿಗೆ ಒಲಿವ ಪ್ರೇಮಕೆ ಮಣಿವ ಶಿವನುˌ
ಭಕ್ತರ ಮೊರೆಗೆ ಧರೆಗಿಳಿವ ಶಿವನುˌ
ಮೂಜಗದೊಡೆಯ ಪಾರ್ವತಿ ವಲ್ಲಭ ಶಿವನು
ಮೂಷಿಕ ವಾಹನ ಪಿತನಾದ ಶಿವನುˌ
ಕೈಲಾಸವಾಸಿ ಕಾರುಣ್ಯ ಶಿವನುˌ
ಪ್ರೇಮಮಯಿ ಈ ಗಂಗಾಧರ ಶಿವನುˌ
ನಾಗಾಭರಣ ನಾಟ್ಯ ಶೇಖರ ಶಿವನು,
ನಾಲ್ಮೊಗ ಬ್ರಹ್ಮನ ಆರಾಧ್ಯ ಶಿವನು,
ಕರೆದರೆ ಬರುವ ಕರುಣಾಮಯಿ ಶಿವನುˌ
ಭಕ್ತಿಗೆ ಸೋಲುವ ಪ್ರೇಮಮಯಿ ಶಿವನುˌˌˌ
ಭಜಿಸಲು ಶಿವನಾಮವ ಅನುಕ್ಷಣˌˌ
ಕಳೆಯುವುದು ಜನ್ಮಗಳ ಪಾಪವು ಅರೆಕ್ಷಣˌ
ಬನ್ನಿರಿ ಜ್ಙಾನಜ್ಯೋತಿಗೆ ಭಕ್ತಿತೈಲವೆರೆಯೋಣ
ಶಿವನಾಮವ ಅನುಕ್ಷಣ ಭಜಿಸೋಣ.
- ಮಧುಮಾಲತಿ ರುದ್ರೇಶ್, ಬೇಲೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ