ಬಂದಿದೆ ಶಿವರಾತ್ರಿ
ಜಗದೊಡೆಯನ ಮಹಾರಾತ್ರಿ
ಭಗವಂತನ ಭಜಿಸುವ ರಾತ್ರಿ
ಶಿವ ಭಕ್ತನು ಶಿವನನ್ನು ಸ್ಮರಿಸುವ ರಾತ್ರಿl
ಜಡೆಯಲಿ ಗಂಗೆಯನು
ತಲೆಯಲ್ಲಿ ಚಂದಿರನು
ಕೊರಳಲ್ಲಿ ಸರ್ಪವನು
ಧರಿಸಿಹನು ನಮ್ಮ ಪರ ಶಿವನುl
ಕೈಲಾಸದ ವಾಸಿ
ತಾಯಿ ಪಾರ್ವತಿ ಪಟ್ಟದರಸಿ
ಹಣೆಯಲ್ಲಿ ತ್ರಿನೇತ್ರ ಧರಿಸಿ
ಕಾಪಾಡುವ ನಮ್ಮನ್ನು ಹರಸಿl
ಹರನೆಂದರೆ ತ್ರಿನೇತ್ರ
ಪೂಜಿಪೆ ಬರುವನು ನಮ್ಮತ್ರ
ಬಂದು ಕಳೆವನು ದುಗುಡವ
ಸಿರಿಯ ತೋರಿ ನಮ್ಮನು ಹರಸುವl
ನೋಡಲು ಶಿವಲಿಂಗ ರೂಪ
ತೋರುವನು ಮಂಗಳ ರೂಪ
ತೊರೆಸುವನು ಕೃತ್ಯ ರೂಪ
ಬರೆಯುವನು ಹಣೆಬರಹದ ಪ್ರತಿರೂಪl
ಭಕ್ತಿಗೆ ಒಲಿಯುವವನು
ಮುಕ್ತಿ ಕೊಡುವವನು
ಆಡಂಬರವ ವಲ್ಲದವನು
ನಮ್ಮ ದಿಗಂಬರ ರೂಪದ ಶಿವನುl
ಹರನೆಂದರೆ ಭಯವಿಲ್ಲ
ಹರ ಮನಿದರೆ ಬದುಕಿಲ್ಲ
ಹರನಿಲ್ಲದ ಸ್ಥಳವಿಲ್ಲ
ಹರನಿಲ್ಲದೆ ಒಲವಿಲ್ಲl
ಸತಿದೇವಿಯ ಪರದೈವ
ಶ್ರೀ ಗಣೇಶನ ಕುಲದೈವ
ಭಕ್ತ ಕುಲಕೆ ಕುಲ ತಿಲಕ
ಸಂತ್ರಸ್ತರಿಗೆ ಪರಿಪಾಲಕl
ವಿಭೂತಿಪ್ರಿಯ ದಿಗಂಬರ
ಬಯಸಲಾರನು ಆಡಂಬರ
ನಾಟ್ಯಪ್ರಿಯ ನಟರಾಜ
ನಿಷ್ಠೆ ಪ್ರಿಯ ಗುಣ ತೇಜl
ಸಮುದ್ರ ಮಥನದಲಿ
ವಿಷವ ಕುಡಿಯುತಲಿ
ಅಮೃತವ ಉಳಿಸುತಲಿ
ಮನುಕುಲವ ಬೆಳಗುತಲಿl
ನಿನ್ನಂದಕೆ ಮರುಳಾದಳು ಗೌರಿ
ನೀನಿರದೆ ಇರಲಾರದ ಸುಂದರಿ
ನಿನ್ನೊಡನೆ ಜಗ ಪಾಲಿಸುವ ಪರಿ
ನಿನಗಾಗಿ ಸದಾ ಪರಿತಪಿಸುವ ಸಿರಿl
ಶಿವನೆಂದರೆ ಅಭಯ
ನನಗಾಗಿ ನೀಡುವೆಯಾ
ನನ್ನ ಭಕ್ತಿಯ ಮೆಚ್ಚುವೆಯ
ನಿನ್ನ ಸೇವೆಗೆ ದಾರಿ ತೋರಿಸುವೆಯಾl
- ಶಾರದ ದೇವರಾಜ್,
ಎ ಮಲ್ಲಾಪುರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ