ಶನಿವಾರ, ಫೆಬ್ರವರಿ 25, 2023

ಜಗವ ಪಾಲಿಸು ಶಿವನೇ (ಕವಿತೆ) - ಶಾರದ ದೇವರಾಜ್, ಎ. ಮಲ್ಲಾಪುರ.

ಸಲಿಲದೊಳು ಮಿಂದೆದ್ದು
 ವಲ್ಕಲವ ಧರಿಸಿದ್ದು
 ಉದಯದ ತಂಗಾಳಿಯಲಿ
 ಹರನ ಶೋಭಿಯ  ಸ್ರವಿಸುತ್ತಿರಲುl

 ಜಗದೊಡೆಯನ ಶೋಭಿಯ 
ಕಣ್ತುಂಬಿಕೊಳ್ಳಲು ವಿಭಕ್ತಿಯಿಂದ
 ಕೂಡಿದ್ದು ಇಂಚರದಿ ಬೇಡುತಾ  ಸನ್ನಡತೆಯ ಕೋರಿದೆನು ವಾಗ್ದಾನ ಬೇಡುತl

 ಜಗದೊಳಿಹ ಜನರ ದುಗುಡವ
 ಕಂಡು ಚಕಿತವು ಜನಿಸಿದ್ದು
 ಮನದಿ ಕಾರ್ಮೋಡವು ಜರುಗಿ
 ಕಣ್ಗಳಲ್ಲಿ  ಅಶ್ರೂರಸ ತುಂಬಿದ್ದು
 ಲೋಪವಾಯಿತು ಎನ್ ಮನದ 
ವ್ಯಾಪದ ಸಮಷ್ಟಿ  ಬಯಕೆಗಳುl

 ಬೆಸೆಯುವೆ ಭಗವಂತನೇ
 ದೌರ್ಜನ್ಯವ ನಿಷೇಧಿಸಿ   ನಿಸ್ಸಾರವಾಗಿ ನುಡಿಯುವ ಆಣತಿಗೆ
 ಭಂಗಿಸಿ ಆಡುವವರಿಗೆ ಪುಂಜ  ನೀಡು
  ಸಮಸ್ಟಿಯ ಕೀಳು ಗೈಮೆಗೆ
 ಸಿದಿಗೆ ಕಟ್ಟಿ ತಿಲಾನ್ನ ಬಿಡುl
 - ಶಾರದ ದೇವರಾಜ್, ಎ. ಮಲ್ಲಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...