ಶನಿವಾರ, ಫೆಬ್ರವರಿ 25, 2023

ಜಂಗಮವಾಣಿ (ಕವಿತೆ) - ಮಾಲತಿ ಮೇಲ್ಕೋಟೆ.

ಗೋಡೆ ಗಡಿಯಾರ ಬೇಕಿಲ್ಲ
ಕೈ ಗಡಿಯಾರವು ಬೇಕಿಲ್ಲ
ಅಕ್ಷರ ಬರೆಯಲೆಬೇಕಿಲ್ಲ
ಪುಸ್ತಕಗಳೂ ಬೇಕಿಲ್ಲ
 ಜಂಗಮವಾಣಿಯು ಇಹುದಲ್ಲ

ಬಾನುಲಿಯೂ ಬೇಕಿಲ್ಲ
ಧ್ವನಿಮುದ್ರಕವೂ ಬೇಕಿಲ್ಲ
ಛಾಯಾಗ್ರಹಣ ಮಾಡಬೇಕೇ
ಗಣಕಯಂತ್ರ ಬೇಕಿದೆಯೇ
ಜಂಗಮವಾಣಿ ಇಹುದಲ್ಲ

ಸ್ನೇಹಿತರೂ ಬೇಕಿಲ್ಲ
ಸಂಬಂಧಿಕರೂ ಬೇಕಿಲ್ಲ
ಕೈಯಲಿ ಹಣವೂ ಬೇಕಿಲ್ಲ
ಏನನು ನೆನಪಿಡಬೇಕಿಲ್ಲ
ಜಂಗಮವಾಣಿ ಇಹುದಲ್ಲ

ವಿಳಾಸ ತಿಳಿಯಬೇಕಿಲ್ಲ
ನಕ್ಷೆ ಇದರಲಿ ಇಹುದಲ್ಲ
ಅರ್ಥ ತಿಳಿಯಬೇಕಿಲ್ಲ
ಇದರಲಿ ಎಲ್ಲವೂ ಇಹುದಲ್ಲ

ತಾಯ್ತಂದೆ ಮಕ್ಕಳಲಿ 
ಅಂತರ ಬೆಳೆಯುತ್ತಿಹುದಲ್ಲ
ಪಕ್ಕದಲೇ ಇದ್ದರೂ 
ಮೊಗ ನೋಡಲು ಬಿಡುವಿಲ್ಲ

ಮುಟ್ಟಿದರೊಮ್ಮೆ ಸಾಕಿದಕೆ
ಜಂಗಮವಾಣಿಯೆ ಮಾಡುವುದು
ಮನುಜ ಮನುಜರನ್ನು ಮಾತ್ರ
ಮುಟ್ಟಲು ಈಗ ಬಿಡುವಿಲ್ಲ

ವೈಜ್ಞಾನಿಕ ಪ್ರಗತಿಯಿದು
ಸಂಬಂಧಗಳನೇ ಕೊಂದಿತು
ಮನ: ಶಾಂತಿಯ ತಿಂದಿತು
ಆರೋಗ್ಯವನು ಕೆಡಿಸಿತು

 ಜಂಗಮವಾಣಿ ಇರದೆಯೆ
ಬದುಕಲಾರೆವು ನಾವೀಗ
ಜಂಗಮವಾಣಿಯೊಂದಿರೆ
ಮನುಜರೇ ಬೇಕಿಲ್ಲ
- ಮಾಲತಿ ಮೇಲ್ಕೋಟೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...