ಕೋಟಿಗೊಳ ಕೋಟೆ
ಏಳು ಸುತ್ತಿನ ಕೋಟೆ
ದುರ್ಗಗಳ ದುರ್ಗಾ
ಸಾವಣದುರ್ಗ.
ಅಭೇದ್ಯ -ಅಸಾಧ್ಯ
ನಿರ್ಮಾಣ ಅನರ್ಘ್ಯ
ವಿಶಿಷ್ಟ- ಬಲಿಷ್ಠ
ಸಮರ್ಥ ಶಿಕಾಯ
ಬಂಡೆಗಳ ದೊರೆ!
ಏಕಶಿಲಾ ಸೆರೆ
ನಾಡಪ್ರಭುಗಳು ಮೆರೆದ
ಸಾವಂದಿಶ್ವರನ ನೇಲೆ
ದಳವಾಯಿಗಳ ,ಸಾವಿನ ದುರ್ಗ
ಉಗ್ರಂ ವೀರಂ ಸಾವಣದುರ್ಗ!
ಕಸ್ತೂರಿ ಕರಿಗುಡ್ಡ
ಹಾಲಂತ ಬಿಳಿಗುಡ್ಡ
ಹೊಯ್ಸಳ ಬಲ್ಲಾಳ
ಸಾಮಂತರಾಯನ ಸೇನಾನೇಲೆ
ಏಕಶಿಲಾ ಮಹಾಗಣಿ
ಕೆಂಪೇಗೌಡರ ದ್ವಿತಿಯ ರಾಜಧಾನಿ!
ವಿವಿಧ ಪ್ರಭೇದಗಳ ಅಡವಿ
ಕರಿಗಳ ನೆಚ್ಚಿನದುರ್ಗ
ಸಿಡಿಲಿಗು ಬೆಚ್ಚದ ಕಲ್ಲಿನ ಕೋಟೆ
ಬಲು ಕಠಿಣವಿ ದುರ್ಗದ ಕೋಟೆ
ದುರ್ಗಮ ಅತಿ ದುರ್ಗಮ
ವೀರರ ತವರು ಸಾವನದುರ್ಗ!
- ಲಕ್ಷ್ಮಿ ಕಿಶೋರ್ ಅರಸ್, ಆಂಗ್ಲ ಉಪನ್ಯಾಸಕರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ