ಶನಿವಾರ, ಫೆಬ್ರವರಿ 25, 2023

ಕಾಯುತ್ತಲೇ ಇರುವೆ ನಿನಗಾಗಿ (ಕವಿತೆ) -ತರುಣ ಈಶಪ್ಪ ಪೂಜಾರ.

ಹುಣ್ಣಿಮೆಯ ಬೆಳದಿಂಗಳ ಚಂದಿರನೇ ನಾಚುವ ಹಾಗಿದೆ,
ನಿನ್ನ ಮುಖ ಕಮಲ. 
ಈ ನಿನ್ನ ನಗುವ ಬೆಳದಿಂಗಳ ಕಂಡು ಅರಳಿದೆ ಕಮಲ.

ನಕ್ಷತ್ರದ ಕಾಂತಿಯನ್ನೇ ಕನ್ನಡಿಯಲಿ
ಪ್ರತಿಬಿಂಬಿಸುವ ಚೆಲುವೆ ನೀನು.
ರಾತ್ರಿ ಚಂದ್ರನಿಗೆ ಚಂದದ ಪೈಪೋಟಿ ನೀನು.

ನಿನ್ನ ನಾಚಿಕೆಯೇ ನಿನಗೆ ಅಲಂಕಾರ,  ಮಿಂಚುತಿದೆ ನಿನ್ನ ಕೊರಳಲಿ ನಕ್ಷತ್ರದ ಹಾರ.

ನಾ ಸೋತು ಹೋದೆ ಗೆಳತಿ!!
ಮಿಂಚಿನ ನಿನ್ನ ಚೆಲುವ ನಡಿಗೆಗೆ, 
ನಿನ್ನ ನೋಟದ ಸೆಳೆತಕೆ, 
ನಿನ್ನ ಕಿವಿ ಜುಮುಕಿಯ ವೈಯಾರದ ನಾಟ್ಯಕ್ಕೆ, 

ನೀ ಎತ್ತ ಹೋದೆ ಗೆಳತಿ. 
ನಿನ್ನ ನೆನಪಿನ ಬಾಣಗಳು ನನ್ನ ಇರಿಯುತಿವೆ. 
ನಾನಿನ್ನೂ ನಿನ್ನ ದಾರಿಯ ಕಾಯುತ್ತಲೇ ಇರುವೆ.


- ತರುಣ ಈಶಪ್ಪ ಪೂಜಾರ, 8884996149.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...