ಶನಿವಾರ, ಫೆಬ್ರವರಿ 25, 2023

ಶರೀಫನ ತಂಬೂರಿ (ಕವಿತೆ) - ಮಹಮ್ಮದ್ ರಫೀಕ್, ಕೊಟ್ಟೂರು.

ನನ್ನ‌ ಪ್ರಶ್ನೆಗಳಿಗೆ ಅವರು ಉತ್ತರ  ನೀಡಲಿಲ್ಲ
ಅವರೂ ಪ್ರಶ್ನೆಗಳಲ್ಲೇ ಉತ್ತರಿಸಿದರು
ಪ್ರಶ್ನೆಗೆ ಪ್ರಶ್ನೆಯೇ ಉತ್ರರವಾದೀತೇ?

ಉತ್ತರಗಳಿಲ್ಲದ ಪ್ರಶ್ನೆಗಳು
ನನ್ನ ಬಳಿಯೂ ಇರುವಾಗ 
ನನ್ನದೂ ತಪ್ಪಲ್ಲವೆಂದು ಹೇಗೆ ಹೇಳಲಿ?

ಹಾಗೇ ಅಳು ಒತ್ತರಿಸಿ
ಬರುತ್ತಿದೆ
ಹೃದಯದ ಭಾರ ಹೆಚ್ಚುತ್ತಿದೆ
ಮನದಾಳದ ದು:ಖ ನೋವುಗಳಿಂದಲ್ಲ
ನನ್ನವರು ದೂರವಾಗುತ್ತಿದ್ದಾರೆಂಬ ದುಗುಡದಿಂದ

ತಪ್ಪು ಒಪ್ಪುಗಳ ನಡುವೆ
ಒಪ್ಪವಾಗಿಹ ಬದುಕು
ಪ್ರಶ್ನೆಗಳಲೇ ಕಂದಕವಾಗದಿರಲಿ
ನಾನು ನಿನಗೆ ಸೋಲಬೇಕೆಂದಿದ್ದೆ
ನನ್ನೊಳಗಿನ ನೀನು ಸೋಲಲಿಲ್ಲ
ನಾನು ಗೆಲ್ಲಲಾಗುತ್ತಿಲ್ಲ!

ಶರೀಫನ  ತಂಬೂರಿ ಶೃತಿ ಹಿಡಿಯಬೇಕಿದೆ
ನನ್ನ ಮನೆಯಂಗಳದ
ಮಣ್ಣಿನಲಿ ಒಡಮೂಡಿದ
ಗಣೇಶ ಪಕ್ಕದ ಮನೆಯ
ಗೌರಿಯ ತೊಡೆಯೇರಿ ಕುಳಿತಿರಲು

- ಮಹಮ್ಮದ್ ರಫೀಕ್, ಕೊಟ್ಟೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...