ಶನಿವಾರ, ಫೆಬ್ರವರಿ 18, 2023

ಮಹಾತ್ಮರು (ಕವಿತೆ) - ಸಬ್ಬನಹಳ್ಳಿ ಶಶಿಧರ.

ಸಾವಿರದ ಶರಣರು
ಈ ಮಹಾಸಂತರು
ಹುಡುಕಿದರು ಮತ್ತೆಲ್ಲು
ಸಿಗದ ಶಿವ ಶರಣರು

ಬಸವೇಶ್ವರರ ಹಾದಿಯನ್ನೆ
ಹಿಡಿದವರು
ಸಕಲೆಲ್ಲ ಭೋಗಗಳ
ತೊರೆದು ನಿಂತವರು

ಧರೆಗಿಳಿದು ಬಂದಂಥ
ನಡೆದಾಡೊ ದೇವರು
ಆಡಂಬರವ ದೂಡಿ
ಸರಳತೆ ಮೆರೆದವರು

ಸಂತರಿಗೆ ಸಂತರು
ಈ ಮಹಾ ಋಷಿಗಳು
ಕರುನಾಡಿನಲ್ಲಿದ್ದ
ಕರುಣೆಯ ಯತಿಗಳು

ಶುದ್ಧ ಮನಸಿನ ಸಿದ್ಧ
ಸಾಧಕರು ಇವರು
ಶ್ವೇತ ಉಡುಪನು ತೊಟ್ಟು
ಜ್ಞಾನದೀವಿಗೆಯಾದರು

ಹೆಸರಿಗೆ ತಕ್ಕಂತೆ ಇರುವ
ಸಿದ್ದೇಶ್ವರರು
ಎಲ್ಲ ಸಿದ್ಧಿಯನು ಪಡೆದು
ದಂತ ಕಥೆಯಾದರು
   
   
- ಸಬ್ಬನಹಳ್ಳಿ ಶಶಿಧರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...